ಬಿಜೆಪಿ, ಶಿವಸೇನೆ ನಡುವೆ ಸೀಟು ಹಂಚಿಕೆ..! ಯಾರಿಗೆಷ್ಟು ಸೀಟು..?

ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆ ನಡುವೆ ಸೀಟು ಹಂಚಿಕೆ ಅಂತಿಮವಾಗಿದೆ. ಎರಡೂ ಪಕ್ಷಗಳ ನಡುವೆ ಹಲವು ಸಮಯದಿಂದ ಸೀಟು ಹಂಚಿಕೆ ಬಗ್ಗೆ ಗೊಂದಲಗಳಿದ್ದವು. ಈಗ ಅಂತಿಮವಾಗಿ ಬಿಜೆಪಿಒ 144 ಮತ್ತು ಶಿವಸೇನೆ 126 ಕ್ಷೇತ್ರಗಳಲ್ಲಿ ಸ್ಪರ್ಧಿಸೋದು ಪಕ್ಕಾ ಆಗಿದೆ. ಇನ್ನು ಉಳಿದ 18 ಸ್ಥಾನಗಳನ್ನು ಉಳಿದ ಮೈತ್ರಿ ಪಕ್ಷಗಳಿಗೆ ಬಿಟ್ಟುಕೊಡಲು ನಿರ್ಧರಿಸಲಾಗಿದೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಒಟ್ಟು 288 ಸೀಟುಗಳಿವೆ. ಅಲ್ಲದೆ ಶಿವಸೇನೆಗೆ ಡಿಸಿಎಂ ಪಟ್ಟ ನೀಡಲು ಬಿಜೆಪಿ ಒಪ್ಪಿಕೊಂಡಿದೆ. ಭಾನುವಾರ ಈ ಸಂಬಂಧ ಅಧಿಕೃತವಾಗಿ ಘೋಷಣೆ ಹೊರಬೀಳುವ ಸಾಧ್ಯತೆ ಇದೆ. ಅಕ್ಟೋಬರ್ 21ರಂದು ಮಹಾರಾಷ್ಟ್ರಕ್ಕೆ ಚುನಾವಣೆ ನಡೆಯಲಿದ್ದು, 24ಕ್ಕೆ ಫಲಿತಾಂಶ ಹೊರಬೀಳಲಿದೆ.

ಚುನಾವಣೆಗೆ ಇನ್ನೂ ಕೆಲವೇ ದಿನಗಳು ಬಾಕಿ ಇರುವಾಗ ಶಿವಸೇನೆ ಜೊತೆಗಿನ ಭಿನ್ನಮತ ಬಗೆಹರಿಸುವಲ್ಲಿ ಅಮಿತ್ ಶಾ ಮತ್ತು ಪಕ್ಷದ ಕಾಯಾಧ್ಯಕ್ಷ ಜೆ.ಪಿ. ನಡ್ಡಾ ಯಶಸ್ವಿಯಾಗಿದ್ದಾರೆ. ಶಿವಸೇನೆ 50:50 ಸೂತ್ರ ಮುಂದಿಟ್ಟಿದ್ದರಿಂದ ಮಹಾರಾಷ್ಟ್ರ ಬಿಜೆಪಿ ನಾಯಕರು ಸ್ವತಂತ್ರವಾಗಿ ಸ್ಪರ್ಧಿಸೋ ಬಗ್ಗೆ ಒತ್ತಾಯ ಮಾಡಿದ್ದರು. ಆದ್ರೆ ವರಿಷ್ಠರ ಸಭೆಯಲ್ಲಿ ಎಲ್ಲವೂ ಬಗೆಹರಿದಿದ್ದು, ಸೀಟು ಹಂಚಿಕೆ ಫೈನಲ್ ಆಗಿದೆ.

Contact Us for Advertisement

Leave a Reply