ಮಹಾರಾಷ್ಟ್ರದಲ್ಲಿ ಮೊಟ್ಟ ಮೊದಲು ಝೀಕಾ ವೈರಸ್ ಪತ್ತೆ!

masthmagaa.com:

ಕೊರೋನಾ ಎರಡನೇ ಅಲೆಯಿಂದ ಕಂಗೆಟ್ಟು ಹೋಗಿದ್ದ ಮಹಾರಾಷ್ಟ್ರದಲ್ಲೀಗ ಮೊಟ್ಟ ಮೊದಲ ಝೀಕಾ ವೈರಸ್ ಪತ್ತೆಯಾಗಿದೆ. ಪುಣೆಯ ಪುರಂದರ ಮೂಲದ 50 ವರ್ಷದ ಮಹಿಳೆಯಲ್ಲಿ ಝೀಕಾ ಮತ್ತು ಚಿಕನ್ ಗುನ್ಯ ಒಟ್ಟೊಟ್ಟಿಗೆ ಕಾಣಿಸಿಕೊಂಡಿದೆ. ಸದ್ಯ ಮಹಿಳೆ ಕಂಪ್ಲೀಟಾಗಿ ಚೇತರಿಸಿಕೊಂಡಿದ್ದು, ಆಕೆ ಮತ್ತು ಆಕೆಯ ಕುಟುಂಬದವರಲ್ಲಿ ಯಾವುದೇ ಲಕ್ಷಣಗಳಿಲ್ಲ ಅಂತ ಮಹಾರಾಷ್ಟ್ರ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಅಂದಹಾಗೆ ಜುಲೈ ಮೊದಲ ವಾರದಲ್ಲಿ ಇಲ್ಲಿನ ಹಲವು ಜನರಲ್ಲಿ ಜ್ವರ ಕಾಣಿಸಿಕೊಂಡಿತ್ತು. ಇವರ ಪೈಕಿ ಐವರ ಸ್ಯಾಂಪಲ್​​ನ್ನು ಪರೀಕ್ಷೆಗೆ ಅಂತ ಪುಣೆಯ ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಲಾಗಿತ್ತು. ಇವರ ಪೈಕಿ ಮೂವರಲ್ಲಿ ಚಿಕನ್​ಗುನ್ಯಾ ಪತ್ತೆಯಾಗಿತ್ತು. ಹೀಗಾಗಿ ಜುಲೈ 27 ಮತ್ತು 29ರ ನಡುವೆ ಈ ತಾಲೂಕಿನ ಗ್ರಾಮಗಳಿಗೆ ಭೇಟಿ ನೀಡಿದ ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ವೈರಾಲಜಿ, 41 ಮಂದಿಯ ಸ್ಯಾಂಪಲ್ ಸಂಗ್ರಹಿಸಿತ್ತು. ಇವರ ಪೈಕಿ 25 ಮಂದಿಗೆ ಚಿಕನ್ ಗುನ್ಯಾ, ಮೂವರಲ್ಲಿ ಡೆಂಗ್ಯು ಮತ್ತು ಒಬ್ಬರಲ್ಲಿ ಝೀಕಾ ವೈರಸ್ ಪತ್ತೆಯಾಗಿದೆ.

-masthmagaa.com

Contact Us for Advertisement

Leave a Reply