masthmagaa.com:

ಮಲಯಾಳಂನ ‘ಜಲ್ಲಿಕಟ್ಟು’ ಸಿನಿಮಾ ಭಾರತದಿಂದ ಅಧಿಕೃತವಾಗಿ 2021ರ ಆಸ್ಕರ್ ಪ್ರಶಸ್ತಿಗೆ ಎಂಟ್ರಿ ಪಡೆದುಕೊಂಡಿದೆ. ಈ ಚಿತ್ರವನ್ನ ಲಿಜೋ ಜೋಸ್​ ಪೆಲ್ಲಿಸ್ಸೆರಿ ಡೈರೆಕ್ಟ್​ ಮಾಡಿದ್ದಾರೆ. 2019ರಲ್ಲಿ ರಿಲೀಸ್ ಆದ ಈ ಚಿತ್ರದಲ್ಲಿ ಆಂಟೋನಿ ವರ್ಗಿಸ್, ಚೆಂಬನ್ ವಿನೋದ್ ಜೋಸ್ ಮುಂತಾದವರು ನಟಿಸಿದ್ದಾರೆ. ಇದು ಹರೀಶ್ ಎಸ್​. ಎಂಬುವವರು ಬರೆದಿರುವ ‘ಮಾವೋಯಿಸ್ಟ್’ ಪುಸ್ತಕ ಆಧಾರಿತವಾಗಿದೆ. ಸದ್ಯ ಈ ಚಿತ್ರವನ್ನ ‘ಬೆಸ್ಟ್ ಇಂಟರ್​ನ್ಯಾಷನಲ್ ಫೀಚರ್ ಫಿಲಂ’ ಕೆಟಗರಿ ಅಡಿಯಲ್ಲಿ ಸೆಲೆಕ್ಟ್​ ಮಾಡಲಾಗಿದೆ.

ಈ ಚಿತ್ರವು ಅಮಿತಾಭ್ ಬಚ್ಚನ್ ನಟನೆಯ ‘ಗುಲಾಬೊ ಸಿತಾಬೊ’, ಅನುಷ್ಕಾ ಶರ್ಮಾ ನಿರ್ಮಾಣದ ‘ಬುಲ್​ಬುಲ್’, ಪ್ರಿಯಾಂಕಾ ಚೋಪ್ರಾ ನಟನೆಯ ‘ದಿ ಸ್ಕೈ ಈಸ್ ಪಿಂಕ್’, ನವಾಝುದ್ದಿನ್ ಸಿದ್ದಿಕಿ ನಟನೆಯ ‘ಸೀರಿಯಸ್ ಮೆನ್’ ಮುಂತಾದ ದೊಡ್ಡ ದೊಡ್ಡ ಸಿನಿಮಾಗಳನ್ನ ಸೋಲಿಸಿ ಆಸ್ಕರ್​ ಅವಾರ್ಡ್​ಗೆ ಆಯ್ಕೆಯಾಗಿದೆ. ‘ಜಲ್ಲಿಕಟ್ಟು ಚಿತ್ರದ ಥೀಮ್, ಪ್ರೊಡಕ್ಷನ್ ಕ್ವಾಲಿಟಿ ಮತ್ತು ಲಿಜೋ ಜೋಸ್ ಪೆಲ್ಲಿಸ್ಸೆರಿ ಅವರ ನಿರ್ದೇಶನ ಅತ್ಯದ್ಭುತ’ ಅಂತ ಫಿಲಂ ಫೆಡರೇಷನ್​ ಆಫ್ ಇಂಡಿಯಾದ ಅಧ್ಯಕ್ಷ ರಾಹುಲ್ ರವೈಲ್ ಹಾಡಿ ಹೊಗಳಿದ್ದಾರೆ.

2019ರಲ್ಲಿ ರಣ್ಬೀರ್ ಸಿಂಗ್ ನಟನೆಯ ‘ಗಲ್ಲಿ ಬಾಯ್’ ಚಿತ್ರ ಭಾರತದಿಂದ ಆಸ್ಕರ್ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿತ್ತು. ಆದ್ರೆ ಅಂತಿಮವಾಗಿ ಪ್ರಶಸ್ತಿ ಗೆಲ್ಲಲು ವಿಫಲವಾಗಿತ್ತು. ದಕ್ಷಿಣ ಕೊರಿಯಾದ ‘ಪ್ಯಾರಸೈಟ್’ ಎಂಬ ಸಿನಿಮಾ ‘ಬೆಸ್ಟ್ ಇಂಟರ್​ನ್ಯಾಷನಲ್ ಫೀಚರ್ ಫಿಲಂ’ ಕೆಟಗರಿಯಲ್ಲಿ ಆಸ್ಕರ್ ಅವಾರ್ಡ್ ಗೆದ್ದಿತ್ತು. ಅಲ್ಲದೆ ಆಸ್ಕರ್ ಅವಾರ್ಡ್ ಗೆದ್ದ ಏಕೈಕ ನಾನ್​-ಇಂಗ್ಲಿಷ್​ (ಇಂಗ್ಲಿಷ್​ ಭಾಷೆ ಹೊರತುಪಡಿಸಿದ) ಸಿನಿಮಾ ಎಂಬ ದಾಖಲೆ ಬರೆಯಿತು. ಈ ಸಲ ಭಾರತದಿಂದ ‘ಜಲ್ಲಿಕಟ್ಟು’ ನಾಮ ನಿರ್ದೇಶನಗೊಂಡಿದೆ. ಆಸ್ಕರ್ ಪ್ರಶಸ್ತಿ ಗೆದ್ದು ಬರ್ಲಿ ಅಂತ ಆಶಿಸೋಣ.

-masthmagaa.com

Contact Us for Advertisement

Leave a Reply