ಅದಾನಿ ಕಂಪನಿ ಮೇಲೆ ಮೋಸದ ಆರೋಪ! ಒಂದೇ ದಿನ ₹4,60,00,00,00,000 ಕೋಟಿ ಗಾನ್!

masthmagaa.com:

ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿ, ಏಷ್ಯಾದ ರಿಚೆಸ್ಟ್‌ ಮ್ಯಾನ್‌ ಗೌತಮ್‌ ಅದಾನಿ ಸಾಮ್ರಾಜ್ಯಕ್ಕೆ ದೊಡ್ಡ ಗಂಡಾಂತರ ಒಂದು ಬಂದೊದಿಗಿದೆ. ಅದಾನಿ ಸಮೂಹ ಕಳೆದ 2 ದಶಕಗಳಿಂದ ಷೇರು ಅವ್ಯವಹಾರ, ಅಕೌಂಟಿಂಗ್‌ ಫ್ರಾಡ್‌ ಅಂದ್ರೆ ಲೆಕ್ಕಪತ್ರ ವಂಚನೆ ಸೇರಿದಂತೆ ಹಲವು ಅವ್ಯವಹಾರಗಳಲ್ಲಿ ತೊಡಗಿದೆ ಅಂತ ಅಮೆರಿಕದ ಹೂಡಿಕೆ ಸಂಸ್ಥೆಯೊಂದು ಆರೋಪಿಸಿದೆ. ಇದ್ರ ಬೆನ್ನಲ್ಲೇ, ಒಂದೇ ದಿನದಲ್ಲಿ ಅದಾನಿ ಗ್ರೂಪ್‌ನ ಷೇರುಗಳ ಮೌಲ್ಯ 10% ಕುಸಿದಿದೆ. ಇದ್ರಿಂದ ಹೂಡಿಕೆದಾರರಿಗೆ ಸುಮಾರು 46 ಸಾವಿರ ಕೋಟಿ ರುಪಾಯಿ ನಷ್ಟವಾಗಿದೆ. ಅದಾನಿ ಗ್ರೂಪ್‌ ಬಗ್ಗೆ ʻಹಿಂಡನ್‌ಬರ್ಗ್‌ ರಿಸರ್ಚ್‌ʼ ಅನ್ನೋ ಹೂಡಿಕೆ ಸಂಸ್ಥೆಯೊಂದು 2 ವರ್ಷಗಳ ಕಾಲ ಸಂಶೋಧನೆ ಮಾಡಿದೆ. ಈ ವೇಳೆ ಕಂಪನಿಯ ಹಲವಾರು ಮಾಜಿ ಹಿರಿಯ ಅಧಿಕಾರಿಗಳನ್ನ ವಿಚಾರಣೆ ಮಾಡಲಾಗಿದೆ. ಸಾವಿರಾರು ದಾಖಲೆಗಳನ್ನ ಪರಿಶೀಲಿಸಲಾಗಿದೆ ಹಾಗೂ ವಿವಿಧ ದೇಶಗಳಿಗೂ ಸೈಟ್‌ ವಿಸಿಟ್‌ ನೀಡಿ ಮಾಹಿತಿ ಸಂಗ್ರಹಿಸಲಾಗಿದೆ ಅಂತ ಹೇಳಲಾಗಿದೆ. ಅದ್ರಲ್ಲಿ, ಅದಾನಿ ಸಮೂಹ ಹಲವಾರು ದೇಶಗಳಲ್ಲಿ, ಸುಳ್ಳು ಲೆಕ್ಕಪತ್ರವನ್ನ ತೋರಿಸಿದೆ, ಷೇರುಗಳ ಮೌಲ್ಯದಲ್ಲಿ ವ್ಯತ್ಯಾಸ ಮಾಡಿದೆ, ಅಕ್ರಮ ಹಣ ವರ್ಗಾವಣೆ ಮಾಡಿದೆ. ಇದಕ್ಕೆಲ್ಲ ಅಲ್ಲಿನ ಸರ್ಕಾರದಲ್ಲಿ ತನ್ನ ವ್ಯಕ್ತಿಗಳನ್ನ ನೇಮಿಸಿಕೊಂಡಿದೆ. ಇದ್ರಿಂದ ಕಳೆದ 3 ವರ್ಷದಲ್ಲಿ ಅದಾನಿಯವರ ನೆಟ್‌ವರ್ಥ್‌ 100 ಬಿಲಿಯನ್‌ನಷ್ಟು ಅಂದ್ರೆ ಸುಮಾರು 8.2 ಲಕ್ಷ ಕೋಟಿಯಷ್ಟು ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಅದಾನಿ ಸಮೂಹದ ಕಂಪನಿಗಳ ಷೇರುಗಳು 819%ನಷ್ಟು ಏರಿಕೆಯಾಗಿವೆ ಅಂತ ಆರೋಪ ಮಾಡಿದೆ. ಅಲ್ದೇ ಅದಾನಿ ಗ್ರೂಪ್‌ನ ಪ್ರಮುಖ ಕಂಪನಿಗಳು ಹೆಚ್ಚಿನ ಸಾಲ ಹೊಂದಿವೆ. ಸಾಲಕ್ಕೆ ಕಂಪನಿಯ ಷೇರುಗಳನ್ನ ಒತ್ತೆ ಇಡುವ ಮೂಲಕ ಕಂಪನಿ ಆರ್ಥಿಕತೆಯನ್ನ ಅಪಾಯಕ್ಕೆ ಸಿಲುಕಿಸಲಾಗ್ತಿದೆ. ನಾವು ಅದಾನಿ ಗ್ರೂಪ್‌ನ ಕಂಪನಿಗಳಲ್ಲಿ ಶಾರ್ಟ್‌ ಪೊಸಿಷನ್ಸ್‌ ಹೊಂದಿದ್ದೀವಿ ಅಂತ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಶಾರ್ಟ್‌ ಪೊಸಿಷನ್ಸ್‌ ಅಂದ್ರೆ, ಷೇರುಗಳ ಮೌಲ್ಯ ಸದ್ಯದಲ್ಲೇ ಕುಸಿಯಲಿವೆ ಹಾಗಾಗಿ, ಇದ್ರ ಬೆನ್ನಲ್ಲೇ ಅದಾನಿ ಸಮೂಹದ ಬಹುತೇಕ ಕಂಪನಿಗಳ ಷೇರುಗಳ ಮೌಲ್ಯದಲ್ಲಿ ಇಳಿಕೆಯಾಗಿದೆ. ಸುಮಾರು 10% ಷೇರು ಕುಸಿತ ಕಂಡಿದ್ದು, 46 ಸಾವಿರ ಕೋಟಿ ನಷ್ಟ ಆಗಿರ್ಬಹುದು ಅಂತ ವರದಿಯಾಗಿದೆ. ಇನ್ನು ಈ ಆರೋಪಗಳನ್ನ ಅದಾನಿ ಗ್ರೂಪ್‌ ಸಂಪೂರ್ಣವಾಗಿ ಅಲ್ಲಗೆಳೆದಿದೆ. ಈ ಆರೋಪಗಳು ಆಧಾರ ರಹಿತವಾಗಿವೆ. ನಾಳಿದ್ದು ನಾವು 20 ಸಾವಿರ ಕೋಟಿ ಮೌಲ್ಯದ FPO ಅಥವಾ ಪಬ್ಲಿಕ್‌ ಆಫರಿಂಗ್‌ನ್ನ ಲಾಂಚ್‌ ಮಾಡ್ತಿದ್ವಿ. ಇದಕ್ಕೆ ಡ್ಯಾಮೇಜ್‌ ಮಾಡ್ಬೇಕಂತಲೇ ಈ ಟೈಮ್‌ನಲ್ಲಿ ಈ ರೀತಿ ಆರೋಪ ಮಾಡಲಾಗ್ತಿದೆ ಅಂತ ಅದಾನಿ ಗ್ರೂಪ್‌ ಸ್ಟಾಕ್ಸ್‌ನ ಚೀಫ್‌ ಫೈನಾನ್ಷಿಯಲ್‌ ಆಫೀಸರ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply