ಹೋಟೆಲ್‌ ಹಾಗೂ ಬೇಕರಿಗೆ ಸರಬರಾಜುಗಾಗಿ ಸಂಗ್ರಹಿಸಿದ್ದ 500 ಕೆಜಿ ಕೊಳೆತ ಕೋಳಿ ಮಾಂಸ ಸೀಜ್!

masthmagaa.com:

ಹೋಟೆಲ್‌ ಹಾಗೂ ಬೇಕರಿಗಳಿಗೆ ಸರಬರಾಜು ಮಾಡೋಕೆ ಅನ್ಕೊಂಡು ವ್ಯಕ್ತಿಯೊಬ್ಬ ಸುಮಾರು 500 ಕೆಜಿ ಕೊಳೆತ ಕೋಳಿ ಮಾಂಸವನ್ನ ಸಂಗ್ರಹಿಸಿಟ್ಟಿದ್ದ ಘಟನೆ ಕೇರಳದಲ್ಲಿ ಆಗಿದೆ. ಮಲಪುರ ಜಿಲ್ಲೆಯಂ ಜುನೈಸ್‌ ಅನ್ನೋ ವ್ಯಕ್ತಿ ತಮಿಳುನಾಡಿನಿಂದ ಕಡಿಮೆ ರೇಟ್‌ನಲ್ಲಿ ಕೊಳೆತ ಮಾಂಸವನ್ನ ತಂದು ಅದನ್ನ ಎರ್ನಾಕುಲಂನ ಹೋಟೆಲ್‌ ಹಾಗೂ ಬೇಕರಿಗಳಿಗೆ ಮಾರ್ತಾ ಇದ್ದ..ಕಳೆದ ಎರಡು ವರ್ಷಗಳಿಂದ ಇದೇ ಕೆಲಸದಲ್ಲಿದ್ದ ಅಂತ ಹೇಳಲಾಗಿದೆ. ಇತ್ತೀಚಿಗೆ ಕೊಟ್ಟಾಯಂ ಜಿಲ್ಲೆಯಲ್ಲಿ ಹೋಟೆಲ್‌ನ ಮಾಂಸಾಹಾರವನ್ನ ಸೇವಿಸಿ ಮಹಿಳೆಯೊಬ್ರು ಮೃತಪಟ್ಟಿದ್ರು. ಇದಾದ ನಂತರ ಈ ರೀತಿಯ ಜಾಲಗಳ ಮೇಲೆ ಪೊಲೀಸರು ರೇಡ್‌ ಮಾಡ್ತಿದ್ದಾರೆ.

-masthmagaa.com

Contact Us for Advertisement

Leave a Reply