ಊಬರ್‌ ಕ್ಯಾಬ್‌ ಬಳಸಿ ಬ್ಯಾಂಕ್‌ಗೆ ಕನ್ನ ಹಾಕಿದ ಭೂಪ!

masthmagaa.com:

ನಾವು ನೀವೆಲ್ಲ ನಮಗೆ ಬೇಕಾದ ಸ್ಥಳಕ್ಕೆ ಹೋಗೋಕೆ ಊಬರ್‌ ಬಳಸಿದ್ರೆ, ಇಲ್ಲೊಬ್ಬ ವ್ಯಕ್ತಿ ಕಳ್ಳತನ ಮಾಡೋಕೆ ಊಬರ್‌ ಬುಕ್‌ ಮಾಡಿದ ಘಟನೆ ಅಮೆರಿಕದಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ಊಬರ್‌ ಬುಕ್‌ ಮಾಡಿ ಬ್ಯಾಂಕ್‌ ಬಳಿ ಬಂದು ಕ್ಯಾಬ್‌ ಡ್ರೈವರ್‌ಗೆ ಹೊರಗೆ ಕಾಯಲು ಹೇಳಿದ್ದಾನೆ. ನಂತ್ರ ಬ್ಯಾಂಕ್‌ ಒಳಗೆ ಹೋಗಿ ಗನ್‌ ತೋರಿಸಿ ಸಿಬ್ಬಂದಿಗೆ ಹೆದರಿಸಿ, ಬ್ಯಾಂಕ್‌ನಿಂದ ಹಣ ದೋಚಿದ್ದಾನೆ. ಬಳಿಕ ಈತ ಅದೇ ಕ್ಯಾಬ್‌ನಲ್ಲಿ ಮನೆಗೆ ತೆರಳಿದ್ದಾನೆ ಅಂತ ಪೊಲೀಸರು ಹೇಳಿದ್ದಾರೆ. ಅಂದ್ಹಾಗೆ ಈ ಖತರ್ನಾಕ್‌ ಕಳ್ಳನನ್ನು ಬಂಧಿಸಲಾಗಿದೆ ಅಂತ ಪೊಲೀಸರು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply