ಹೆಂಡ್ತಿಯನ್ನು ಕೊಂದು ಮಾವನಿಗೆ ವಿಡಿಯೋ ಕಾಲ್ ಮಾಡಿದ..!

ಹೆಂಡತಿಯನ್ನು ಕೊಲೆ ಮಾಡಿದ ಓರ್ವ ಪತಿರಾಯ ಆಕೆಯ ತಂದೆಗೆ ವಿಡಿಯೋ ಕಾಲ್ ಮಾಡಿ, ಏನು ಮಾಡೋದು ಎಂದು ಕೇಳಿದ್ದಾನೆ. ಅಮೆರಿಕಾದ ಫ್ಲೋರಿಡಾದಲ್ಲಿ ಈ ಘಟನೆ ನಡೆದಿದೆ. ಮೊದಲು 20 ವರ್ಷದ ಪತ್ನಿ ಕಿಯಾರಾ ಅವರನ್ನು ಕೊಲೆಗೈದ 30 ವರ್ಷದ ಡೆಂಜಿಲೋ ಕ್ಲಾರ್ಕ್ ನಂತರ ಆಕೆಯ ತಂದೆ ಶೆಲ್ಡನ್‍ಗೆ ಕರೆ ಮಾಡಿದ್ದಾನೆ. ವಿಡಿಯೋ ಕಾಲ್‍ನಲ್ಲಿ ತನ್ನ ಪುತ್ರಿಯ ರಕ್ತಸಿಕ್ತ ದೇಹ ನೋಡಿ ಶೆಲ್ಡನ್ ದಂಗಾಗಿ ಹೋಗಿದ್ದಾರೆ. ಕೂಡಲೇ ಹೋಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದ್ರೆ ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಕಿಯಾರಾ ಜೀವ ಹೋಗಿತ್ತು. ಈ ಬಗ್ಗೆ ಕೇಳಿದ್ರೆ ಆಕೆ ನನ್ನನ್ನು ಕೊಲೆ ಮಾಡಲು ಯತ್ನಿಸಿದ್ದಳು. ಈ ವೇಳೆ ಈ ದುರಂತ ಸಂಭವಿಸಿತು ಅಂತ ಡೆಂಜಿಲೋ ಕ್ಲಾರ್ಕ್ ಹೇಳಿದ್ದಾನೆ. ಸದ್ಯ ಆತನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಇವರಿಬ್ಬರ ಮಗು ಸಂಬಂಧಿಕರ ಮನೆಯಲ್ಲಿ ಸುರಕ್ಷಿತವಾಗಿದೆ.

Contact Us for Advertisement

Leave a Reply