ಈ ವ್ಯಕ್ತಿಗೆ ಹೃದಯ, ಲಿವರ್ ಇರಬೇಕಾದ ಜಾಗದಲ್ಲಿ ಇಲ್ಲ..!

ಕಣ್ಣು, ಮೂಗು, ಬಾಯಿ ಎಲ್ಲೆಲ್ಲಿ ಇರಬೇಕೋ ಅಲ್ಲಲ್ಲಿ ಇದ್ರೆ ಚಂದ.. ಅದೇ ರೀತಿ ದೇಹದೊಳಗಿನ ಹೃದಯ, ಕಿಡ್ನಿ ಮುಂತಾದ ಭಾಗಗಳೂ ಎಲ್ಲಿ ಇರಬೇಕೋ ಅಲ್ಲೇ ಇದ್ದರೆ ಆರೋಗ್ಯ. ಇಲ್ಲವಾದಲ್ಲಿ ಹಲವು ಸಮಸ್ಯೆ ಕಟ್ಟಿಟ್ಟ ಬುತ್ತಿ. ಉತ್ತರ ಪ್ರದೇಶದ ಕುಶೀನಗರದ ನಿವಾಸಿ ಜಮಾಲುದ್ದೀನ್‍ಗೆ ಕಳೆದ ಕೆಲ ದಿನಗಳಿಂದ ಹೊಟ್ಟೆ ನೋವು ಬರುತ್ತಿತ್ತು. ಹೀಗಾಗಿ ಆತ ಸೆಪ್ಟೆಂಬರ್ 18ರಂದು ಜಿಲ್ಲ ಆಸ್ಪತ್ರೆಗೆ ತೆರಳಿದ್ದಾನೆ. ಅಲ್ಲಿ ವೈದ್ಯರು ಆತನ ಹೊಟ್ಟೆ ಸ್ಕ್ಯಾನ್ ಮಾಡಿ ಫುಲ್ ಶಾಕ್ ಆಗಿದ್ದಾರೆ. ಯಾಕಂದ್ರೆ ಜಮಾಲುದ್ದೀನ್ ದೇಹದ ಒಳಗಿನ ಅಂಗಗಳಾದ ಹೃದಯ, ಲಿವರ್, ಪ್ಯಾಂಕ್ರಿಯಸ್ ಇರಬೇಕಾದ ಜಾಗದಲ್ಲಿ ಇಲ್ಲ. ಬದಲಾಗಿ ಬೇರೆ ಬೇರೆ ಜಾಗದಲ್ಲಿವೆ. ಈ ವಿಷ್ಯ ಕೇಳಿ ಜಮಾಲುದ್ದೀನ್ ಕೂಡ ದಂಗಾಗಿ ಹೋಗಿದ್ದಾರೆ. 200ರಲ್ಲಿ ಮದುವೆಯಾಗಿದ್ದ ಜಮಾಲುದ್ದೀನ್ ಜೀವನದಲ್ಲಿ ಎಲ್ಲವೂ ಸರಿ ಇತ್ತು. ಆದ್ರೆ ಸೆಪ್ಟೆಂಬರ್ 18ರಿಂದ ಹೀಗೆ ನೋವಾಗುತ್ತಿದೆ.

Contact Us for Advertisement

Leave a Reply