ಕುತ್ತಿಗೆಗೆ ಹಾವು ಸುತ್ತಿಕೊಂಡು ಜೀವ ಬಿಟ್ಟ ಭೂಪ!

masthmagaa.com:

ಮಹಾರಾಷ್ಟ್ರದಲ್ಲಿ ವ್ಯಕ್ತಿಯೊಬ್ಬ ಹಾವಿನ ಜೊತೆ ಆಟವಾಡೋಕೆ ಹೋಗಿ ಪ್ರಾಣ ಕಳ್ಕೊಂಡಿದಾನೆ. ಥಾಣೆಯ ಜಿಲ್ಲೆಯ ಮೊಹ್ಮದ್ ಶೇಖ್ ಎಂಬಾತ ಹಾವು ಹಿಡಿದಿದ್ದ. ಅದನ್ನು ಅರಣ್ಯಕ್ಕೋ, ನಿರ್ಜನ ಪ್ರದೇಶಕ್ಕೋ ಬಿಟ್ಟು ಬರೋ ಬದಲು ಅದ್ರ ಜೊತೆಗೆ ಆಟವಾಡೋಕೆ ಶುರು ಮಾಡಿದ್ಧಾನೆ. ಕೊರಳಗೆ ಹಾಕ್ಕೊಂಡು, ಮಾರ್ಕೆಟ್ ತುಂಬಾ ಓಡಾಡಿದ್ದಾನೆ. ಈ ವೇಳೆ ಆ ಹಾವು ಮೂರ್ಮೂರು ಬಾರಿ ಕಚ್ಚಿದ್ರೂ ಮೊಹ್ಮದ್ ಶೇಖ್ ಕೇರ್ ಮಾಡಿರಲಿಲ್ಲ. ಆತನ ಸ್ನೇಹಿತರು ಇದನ್ನು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾಗೂ ಹಾಕಿದ್ರು. ಇದೆಲ್ಲಾ ಆದ್ಮೇಲೆ ಸ್ವಲ್ಪ ಹೊತ್ತಿನ ಬಳಿಕ ಮೊಹ್ಮದ್ ಶೇಖ್ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಜೀವ ಬಿಟ್ಟಿದ್ದಾನೆ.

-masthmagaa.com

Contact Us for Advertisement

Leave a Reply