ಇಸ್ಕಾನ್‌ ಹಸುಗಳನ್ನ ಕಟುಕರಿಗೆ ಮಾರುತ್ತೆ! ಮನೇಕಾ ಗಾಂಧಿ ಗಂಭೀರ ಆರೋಪ! ಇಸ್ಕಾನ್‌ ಹೇಳಿದ್ದೇನು?

masthmagaa.com:

ಗೋವುಗಳ ಸಾಕಾಣಿಕೆ ಹೆಸರಿನಲ್ಲಿ ಅವುಗಳನ್ನು ಕಸಾಯಿಖಾನೆಗೆ ಮಾರಾಟ ಮಾಡುವ ಮೂಲಕ ದೇಶದಲ್ಲಿ ಇಸ್ಕಾನ್ ಅತಿ ದೊಡ್ಡ ವಂಚನೆ ಮಾಡ್ತಿದೆ ಅಂತ ಬಿಜೆಪಿ ಸಂಸದೆ ಮನೇಕಾ ಗಾಂಧಿ ಆರೋಪಿಸಿದ್ದಾರೆ. ಮೇನಕಾ ಗಾಂಧಿ ಅವರು ಇಸ್ಕಾನ್ ಮೇಲೆ ಮಾಡಿರುವ ಗಂಭೀರ ಆರೋಪದ ವೀಡಿಯೋ ವೈರಲ್ ಆಗಿದೆ. ಈ ದೇಶದಲ್ಲಿ ಅತೀ ದೊಡ್ಡ ಮೋಸಗಾರರು ಅಂದ್ರೆ ಅದು ಇಸ್ಕಾನ್. ಇವರು ಗೋ ಶಾಲೆಗಳನ್ನು ನಡೆಸಲು ಸರ್ಕಾರದಿಂದ ಬೇಕಾದ ಸೌಲಭ್ಯ, ದೊಡ್ಡ ದೊಡ್ಡ ಜಮೀನುಗಳು, ಗೋಮಾಳಗಳು ಎಲ್ಲ ವ್ಯವಸ್ಥೆ ಸಿಗುತ್ತವೆ. ಇತ್ತೀಚೆಗಷ್ಟೇ ನಾನು ಇಸ್ಕಾನ್‌ನ ಅನಂತಪುರದ ಗೋ ಶಾಲೆಗೆ ಭೇಟಿ ನೀಡಿದ್ದೆ. ಅಲ್ಲಿ ಹಾಲು ಕೊಡದ ಒಂದೇ ಒಂದು ಹಸುವಾಗಲಿ ಇಲ್ಲವೇ ಕರುಗಳಾಲಿ ಇರಲಿಲ್ಲ. ಯಾಕಂದ್ರೆ ಎಲ್ಲಾ ಕರುಗಳು ಹಾಗೂ ಹಸುಗಳನ್ನ ಮಾರಾಟ ಮಾಡಲಾಗಿದೆ ಅಂತ ಆರೋಪಿಸಿದ್ದಾರೆ. ಬೀದಿ ಬೀದಿಗಳಲ್ಲಿ ಹರೇ ರಾಮ್- ಹರೇ ಕೃಷ್ಣ ಎಂದು ಹೇಳಿಕೊಂಡು ಅಡ್ಡಾಡುವ ಇವರು ಹಾಲಿನಲ್ಲೇ ಅವರ ಜೀವನವಿದೆ ಎಂಬಂತೇ ಹೇಳಿಕೊಳ್ಳುತ್ತಾರೆ. ಆದರೆ ಇಸ್ಕಾನ್ ಅವರು ಕಸಾಯಿಖಾನೆಗೆ ಮಾರಿದಷ್ಟು ಗೋವುಗಳನ್ನ ಬೇರೆ ಯಾರೂ ಮಾರಿರೋಕೆ ಸಾಧ್ಯವೇ ಇಲ್ಲವೇನೋ? ಇವರೇ ಹೀಗೆ ಮಾಡಿರುವಾಗ ಬೇರೆಯವರ ಕಥೆಯೇನು? ಅಂತ ಪ್ರಶ್ನಿಸಿದ್ದಾರೆ. ಇತ್ತ ಈ ಆರೋಪವನ್ನ ತಳ್ಳಿಹಾಕಿರುವ ಇಸ್ಕಾನ್‌, ಇದೊಂದು ಆಧಾರರಹಿತ ಸುಳ್ಳು ಅರೋಪ ಅಂತ ಹೇಳಿದೆ. ಈ ಬಗ್ಗೆ Xನಲ್ಲಿ ಪೋಸ್ಟ್‌ ಹಾಕಿರುವ ಇಸ್ಕಾನ್ ರಾಷ್ಟ್ರೀಯ ವಕ್ತಾರ ಯುಧಿಷ್ಟಿರ ಗೋವಿಂದ ದಾಸ್, ಇಸ್ಕಾನ್ ಹಸು ಮತ್ತು ಗೂಳಿಗಳ ರಕ್ಷಣೆ ಮತ್ತು ಆರೈಕೆಯಲ್ಲಿ ಭಾರತ ಅಷ್ಟೆ ಅಲ್ದೆ ಜಾಗತಿಕವಾಗಿ ಮುಂಚೂಣಿಯಲ್ಲಿದೆ. ಹಸುಗಳು ಮತ್ತು ಎತ್ತುಗಳ ಆರೈಕೆ ಮಾಡಲಾಗುತ್ತೆ ಹೊರತು ಕಸಾಯಿಖಾನೆಗೆ ಮಾರಾಟ ಮಾಡಲಾಗುವುದಿಲ್ಲ ಎಂದಿದ್ದಾರೆ. ಜೊತೆಗೆ ಮನೇಕಾ ಅವರ ಈ ಆರೋಪ ಸುಳ್ಳು ಮತ್ತು ಆಧಾರ ರಹಿತವಾಗಿದೆ. ಅಲ್ದೆ ಮನೇಕ ಅವರು ಈ ರೀತಿ ಹೇಳಿಕೆ ಕೊಟ್ಟಿರೋದು ಅಚ್ಚರಿ ಮೂಡಿಸಿದೆ. ಎಲ್ಲಿ ದನದ ಮಾಂಸವೇ ಪ್ರಮುಖ ಆಹಾರವಾಗಿದೆಯೋ ಅಂತಹ ರಾಷ್ಟ್ರಗಳಲ್ಲಿ ಕೂಡ ಇಸ್ಕಾನ್ ಗೋ ಸಂರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದೆ. ಅನಾಥವಾಗಿರುವ, ಗಾಯಗೊಂಡಿರುವ ಮತ್ತು ರಕ್ಷಿಸಲಾದ ಗೋವುಗಳನ್ನು ಇಸ್ಕಾನ್‌ನ ಗೋಶಾಲೆಗೆ ಸೇರಿಸುವ ಪದ್ಧತಿ ಈಗಲೂ ಇದೆ ಅಂತ ತಿಳಿಸಿದ್ದಾರೆ. ಇದೇ ವೇಳೆ ಮನೇಕಾ ಗಾಂಧಿಯವರು ಅನಂತಪುರದ ಗೋಶಾಲೆಗೆ ಭೇಟಿ ನೀಡಿದ್ದರ ಬಗ್ಗೆ ಅಲ್ಲಿನ ಯಾವುದೇ ಕೆಲಸಗಾರರಿಗೆ ತಿಳಿದಿಲ್ಲ ಎಂದಿರುವ ಯುಧಿಷ್ಟಿರ್‌ ದಾಸ್‌, ಹಾಲು ಕೊಡದ ಹಸುಗಳ ಬಗ್ಗೆ ಮಾಹಿತಿಯನ್ನೂ ಹಂಚಿಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply