ಮಾರಿಯೋಪೌಲ್‌ನಲ್ಲಿ ಶರಣಾದವ್ರ ಸಂಖ್ಯೆ 959ಕ್ಕೆ ಏರಿಕೆ: ರಷ್ಯಾ

masthmagaa.com:

ಮಾರಿಯೋಪೌಲ್‌ನ ಅಜೋವ್‌ಸ್ಟಾಲ್‌ ಸ್ಟೀಲ್‌ ಪ್ಲಾಂಟ್‌ನಿಂದ ಶರಣಾದ ಯುಕ್ರೇನ್‌ ಸೈನಿಕರ ಸಂಖ್ಯೆ 959ಕ್ಕೆ ಏರಿಕೆಯಾಗಿದೆ ಅಂತ ರಷ್ಯಾ ಹೇಳಿದೆ. ಕಳೆದ 24 ಗಂಟೆಗಳಲ್ಲಿ 694 ಶತ್ರು ಸೈನಿಕರು ಶರಣಾಗಿದ್ದಾರೆ ಇದ್ರಲ್ಲಿ 29 ಜನ ಗಾಯಾಳುಗಳು ಕೂಡ ಸೇರಿದ್ದಾರೆ. ಒಟ್ನಲ್ಲಿ ಮೇ 16ರಿಂದ ಇದುವರೆಗು 959 ಜನ ಸೆರೆಯಾದಂಗೆ ಆಗಿದೆ ಇದ್ರಲ್ಲಿ 80 ಜನ ಗಾಯಗೊಂಡಿದ್ದಾರೆ ಅಂತ ರಷ್ಯಾದ ರಕ್ಷಣಾ ಇಲಾಖೆ ಪ್ರಕಟಣೆ ಬಿಡುಗಡೆ ಮಾಡಿದೆ. ಜೊತೆಗೆ ಗಾಯಗೊಂಡವ್ರನ್ನ ರಷ್ಯಾ ಕಂಟ್ರೋಲ್‌ನಲ್ಲಿರೋ ನೊವೊಜೊವ್‌ಸ್ಕ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ ಅಂತ ಕೂಡ ರಷ್ಯಾ ಹೇಳಿದೆ.

-masthmagaa.com

Contact Us for Advertisement

Leave a Reply