ಗ್ರೀನ್​​ಲ್ಯಾಂಡ್​​​​​ನಲ್ಲಿ ನಿರಂತರವಾಗಿ ಕರಗುತ್ತಿದೆ ಮಂಜುಗಡ್ಡೆ!

masthmagaa.com:

ಗ್ರೀನ್​ಲ್ಯಾಂಡ್​​​ನಲ್ಲಿ ನಿರಂತರವಾಗಿ ಮಂಜುಗಡ್ಡೆ​ ಕರಗುತ್ತಿದ್ದು, ಕಳೆದೊಂದು ವಾರದಲ್ಲಿ ಇಡೀ ಫ್ಲೋರಿಡಾವನ್ನು 2 ಇಂಚು ನೀರಿನಿಂದ ಮುಚ್ಚಲು ಸಾಕಾಗುವಷ್ಟು ನೀರು ಬಿಡುಗಡೆ ಮಾಡಿದೆ ಅಂತ ಡೆನ್ಮಾರ್ಕ್​​​​ ಸಂಶೋಧಕರು ತಿಳಿಸಿದ್ದಾರೆ. ತಮ್ಮ ಪೋಲಾರ್ ಪೋರ್ಟಲ್​​​​ ಟ್ವಿಟ್ಟರ್​ ಖಾತೆಯಲ್ಲಿ ಸಂಶೋಧಕರು ತಾವು ಮಾನಿಟರಿಂಗ್ ಮಾಡಿರೋ ವರದಿಯನ್ನು ಹಾಕಿದ್ದಾರೆ. ಅದ್ರಲ್ಲೂ ಕಳೆದ ಬುಧವಾರ ಒಂದೇ ದಿನ ದೊಡ್ಡ ಮಟ್ಟದಲ್ಲಿ ಐಸ್​ ಶೀಟ್ ಕರಗಿದೆ. ಇದು 1950ರ ಬಳಿಕ ಒಂದೇ ದಿನದಲ್ಲಿ ಇಷ್ಟು ಐಸ್​ ಶೀಟ್ ಕರಗಿರೋದು ಇದೇ ಮೊದಲು ಅಂತ ಕೂಡ ತಜ್ಞರು ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply