masthmagaa.com:

ಉತ್ತರಪ್ರದೇಶದ ಮಥುರಾದಲ್ಲಿರುವ ಶ್ರೀಕೃಷ್ಣ ಜನ್ಮಭೂಮಿ ದೇಗುಲಕ್ಕೆ ಹೊಂದಿಕೊಂಡಿರುವ ಈದ್ಗಾ ಮಸೀದಿಯನ್ನು ತೆರವುಗೊಳಿಸಬೇಕು ಅಂತ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಲು ಮಥುರಾ ಕೋರ್ಟ್​ ಗ್ರೀನ್​ ಸಿಗ್ನಲ್ ಕೊಟ್ಟಿದೆ. ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಮತ್ತು ರಾಮ ಮಂದಿರ ವಿವಾದ ಬಗೆಹರಿದ ಬೆನ್ನಲ್ಲೇ ಮಥುರಾ ವಿವಾದ ಮುನ್ನೆಲೆಗೆ ಬಂದಿರೋದು ಭಾರಿ ಕುತೂಲ ಕೆರಳಿಸಿದೆ. ಮುಂದಿನ ವಿಚಾರಣೆಯು ನವೆಂಬರ್ 18ರಂದು ನಡೆಯಲಿದೆ.

ಅರ್ಜಿ ಕುರಿತು ಸುನ್ನಿ ವಕ್ಫ್​ ಬೋರ್ಡ್​ ಸೇರಿದಂತೆ ಎಲ್ಲಾ ಪಕ್ಷಗಳಿಗೆ ನೋಟಿಸ್ ನೀಡಿರುವ ಮಥುರಾ ಕೋರ್ಟ್​ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ. ಈ ಹಿಂದೆ ಸಿಟಿ ಸಿವಿಲ್ ಕೋರ್ಟ್​​​ನಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು. ಆದ್ರೆ ವಿಚಾರಣೆ ನಡೆಸಲು ನಿರಾಕರಿಸಿದ್ದ ಸಿವಿಲ್ ಕೋರ್ಟ್​​, ವಿಶ್ವದಲ್ಲಿ ಕೃಷ್ಣನ ಭಕ್ತರು ತುಂಬಾ ಜನ ಇದ್ದಾರೆ. ಎಲ್ಲರೂ ಅರ್ಜಿ ಸಲ್ಲಿಸಿದ್ರೆ ನ್ಯಾಯ ವ್ಯವಸ್ಥೆ ಹಾಳಾಗುತ್ತೆ ಅಂತ ಹೇಳಿತ್ತು. ಇದನ್ನು ಪ್ರಶ್ನಿಸಿ ಮಥುರಾ ಜಿಲ್ಲಾ ನ್ಯಾಯಾಲಯಕ್ಕೆ 8 ಅರ್ಜಿಗಳು ಸಲ್ಲಿಕೆಯಾಗಿದ್ವು. ಈ ಅರ್ಜಿಗಳಲ್ಲಿ ಕೃಷ್ಣ ಜನ್ಮಭೂಮಿಯಾದ 13.37 ಎಕರೆ ಜಾಗದ ಮಾಲೀಕತ್ವನ್ನು ನಮಗೆ ನೀಡಿ, ಅಲ್ಲಿರೋ ಈದ್ಗಾ ಮಸೀದಿಯನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಲಾಗಿದೆ.

-masthmagaa.com

Contact Us for Advertisement

Leave a Reply