ಅಯೋಧ್ಯೆ ತೀರ್ಪು ಯಾವಾಗ..? ಜಡ್ಜ್​​ಗಳು ಅರ್ಜೆಂಟ್ ಮೀಟಿಂಗ್ ನಡೆಸಿದ್ಯಾಕೆ..?

ದೆಹಲಿ: ಆಯೋಧ್ಯೆ ವಿಚಾರವಾಗಿ ಸುಪ್ರೀಂಕೋರ್ಟ್​ನಲ್ಲಿ ವಿಚಾರಣೆ ಅಂತ್ಯಗೊಂಡ ಬೆನ್ನಲ್ಲೇ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ಸೇರಿದಂತೆ ಐವರು ಜಡ್ಜ್​​ಗಳು ಮೀಟಿಂಗ್ ಮಾಡಿದ್ದಾರೆ. ನಿನ್ನೆ ನಡೆದ ಈ ಮಹತ್ವದ ಸಭೆಯಲ್ಲಿ ಅಯೋಧ್ಯೆ ತೀರ್ಪು ನೀಡುವ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಸಮಯ ಕಡಿಮೆ ಇದೆ, ಜವಾಬ್ದಾರಿ ಜಾಸ್ತಿ ಇದೆ. ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹೇಗೆ ತೀರ್ಪು ಬರೆಯೋದು..? ಅಲಹಾಬಾದ್ ಹೈಕೋರ್ಟ್​ ಯಾವ ಆಧಾರದಲ್ಲಿ ತೀರ್ಪು ಕೈಗೊಂಡಿದೆ..?  ಎಂದು ಮಾತುಕತೆ ನಡೆಸಿದ್ದಾರೆ ಅಂತ ಮೂಲಗಳು ತಿಳಿಸಿವೆ.

ಇನ್ನು ಮುಂದಿನ ಅಕ್ಟೋಬರ್ 10ರಿಂದ -15ರೊಳಗೆ ತೀರ್ಪು ಬರೋದು ಕೂಡ ಪಕ್ಕಾ ಆಗಿದೆ. ಅದ್ರಲ್ಲೂ ನವೆಂಬರ್ 17ರೊಳಗೆ ತೀರ್ಪು ಬಂದೇ ಬರಲಿದೆ ಅಂತ ಮೂಲಗಳು ಮಾಹಿತಿ ನೀಡಿವೆ.

Contact Us for Advertisement

Leave a Reply