ದೇಶದಲ್ಲಿ ಹೆಚ್ಚಾಗುತ್ತಿರುವ ಆತ್ಮಹತ್ಯೆ ಪ್ರಕರಣಗಳು!

masthmagaa.com:

ದೇಶದಲ್ಲಿ ಆತ್ಮಹತ್ಯಾ ದರ ಗರಿಷ್ಟವಾಗಿದೆ ಅಂತ ವರದಿಯೊಂದ್ರಿಂದ ತಿಳಿದು ಬಂದಿದೆ. 2020ರ ಒಟ್ಟು ಆತ್ಮಹತ್ಯೆ ಪ್ರಕರಣಗಳಲ್ಲಿ 71% ಪುರುಷರು ಮತ್ತು 29% ಮಹಿಳೆಯರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಅಂತ ನ್ಯಾಷನಲ್‌ ಸುಸೈಡ್‌ ಪ್ರಿವೆನ್ಶನ್‌ ಸ್ಟ್ರಾಟಜಿ ತಯಾರಿಸಿದ ವರದಿಯಲ್ಲಿ ತಿಳಿಸಲಾಗಿದೆ. ಅಧಿಕ ಯುವ ಜನಸಂಖ್ಯೆಯನ್ನ ಹೊಂದಿರೊ ಭಾರತದಲ್ಲಿ, ಕಳೆದ 3 ವರ್ಷಗಳಲ್ಲಿ ಸುಸೈಡ್‌ ರೇಟ್‌ ಪ್ರತಿ 1 ಲಕ್ಷ ಜನರಿಗೆ 10.2 ರಿಂದ 11.3ಕ್ಕೆ ಏರಿಕೆಯಾಗಿದೆ. ಈ ಪ್ರಕರಣಗಳಿಗೆ ಜನರ ಆರ್ಥಿಕ ಹಾಗೂ ಉದ್ಯೋಗದ ಸ್ಥಿತಿಗತಿಗಳು ಕಾರಣವಾಗಿವೆ ಅಂತ ಹೇಳಲಾಗಿದೆ. ಅದ್ರಲ್ಲೂ ವರ್ಷಕ್ಕೆ 1 ಲಕ್ಷಕ್ಕಿಂತ ಕಡಿಮೆ ಆದಾಯ ಇರೋರೇ ಹೆಚ್ಚಾಗಿ ಆತ್ಮಹತ್ಯೆ ಮಾಡಿಕೊಂಡಿರೋದಾಗಿ ತಿಳಿದು ಬಂದಿದೆ.

-masthmagaa.com

Contact Us for Advertisement

Leave a Reply