ಅಮೆರಿಕದ ಕಚೇರಿಗಳನ್ನ ಖಾಲಿ ಮಾಡ್ತಿರೊ ಮೆಟಾ, ಮೈಕ್ರೋಸಾಫ್ಟ್‌! ಯಾಕೆ?

masthmagaa.com:

ಫೇಸ್‌ಬುಕ್‌, ಇನ್‌ಸ್ಟಾ ಹಾಗೂ ವಾಟ್ಸಾಪ್‌ಗಳ ಪೋಷಕ ಕಂಪನಿ ಮೆಟಾ ಹಾಗೂ ಐಟಿ ಕಂಪನಿ ಮೈಕ್ರೋಸಾಫ್ಟ್‌, ಅಮೆರಿಕದ ಸಿಯಾಟಲ್‌ ಹಾಗೂ ಬೆಲ್‌ವ್ಯೂಗಳಲ್ಲಿರೊ ತಮ್ಮ ತಮ್ಮ ಕಚೇರಿಗಳನ್ನ ಖಾಲಿ ಮಾಡ್ತಿದಾವೆ ಅಂತ ವರದಿಯಾಗಿದೆ. ಸಿಯಾಟಲ್‌ ಮತ್ತು ಬೆಲ್‌ವ್ಯೂನಲ್ಲಿರೊ ತನ್ನ ಕಚೇರಿಗಳನ್ನ ಬೇರೆಯವ್ರಿಗೆ ಲೀಸ್‌ ಕೊಡೋದಾಗಿ ಫೇಸ್‌ಬುಕ್‌ ಕನ್ಫರ್ಮ್‌ ಮಾಡಿದೆ. ಇತ್ತ ಮೈಕ್ರೋಸಾಫ್ಟ್‌ ಕೂಡ ತಾನು ಲೀಸ್‌ಗೆ ತೆಗೆದುಕೊಂಡಿರೊ 24 ಅಂತಸ್ತಿನ ಕಚೇರಿಯ ಲೀಸ್‌ನ್ನ ಅಂತ್ಯಗೊಳಿಸೋದಾಗಿ ಹೇಳಿದೆ. ಅಂದ್ಹಾಗೆ ಹೆಚ್ತಿರೊ ವರ್ಕ್‌ ಫ್ರಮ್‌ ಹೋಮ್‌ ಟ್ರೆಂಡ್‌ನಿಂದ ಹಾಗೂ ಇತ್ತೀಚೆಗೆ ಅನೇಕ ಉದ್ಯೋಗಿಗಳನ್ನ ವಜಾ ಮಾಡಿರೋದ್ರಿಂದ ಆಫೀಸ್‌ಗಳ ಅವಶ್ಯಕತೆ ಕಡಿಮೆ ಆಗಿದೆ. ಈ ಹಿನ್ನಲೆಯಲ್ಲಿ ಕಂಪನಿಗಳು ಈ ಕ್ರಮ ಕೈಗೊಂಡಿವೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply