ಭಾರತದ ಯುದ್ಧ ವಿಮಾನ ಪತನ.. ಇಬ್ಬರು ಪೈಲಟ್‍ಗಳೂ ಸೇಫ್

ಮಧ್ಯಪ್ರದೇಶದ ಗ್ವಾಲಿಯರ್ ಬಳಿ ಮಿಗ್-21 ಯುದ್ಧ ವಿಮಾನ ಪತನಗೊಂಡಿದೆ. ವಿಮಾನದಲ್ಲಿದ್ದ ಇಬ್ಬರು ಕೂಡಲೇ ವಿಮಾನದಿಂದ ಹೊರಜಿಗಿದು ಪ್ಯಾರಾಚೂಟ್ ಮೂಲಕ ಬಚಾವಾಗಿದ್ದಾರೆ. ಈ ವರ್ಷದ ಮಾರ್ಚ್ 31ರಂದು ರಾಜಸ್ಥಾನದ ಬಾರ್ಮರ್ ವಾಯುನೆಲೆಯಲ್ಲಿ ಮಿಗ್ ವಿಮಾನ ಪತನಗೊಂಡಿತ್ತು. ಎಂದಿನಂತೆ ತರಬೇತಿಗಾಗಿ ಗ್ವಾಲಿಯರ್ ವಾಯುನೆಲೆಯಿಂದ ಹೊರಟಿದ್ದ ಈ ವಿಮಾನ 10 ಸುಮಾರಿಗೆ ನಿರ್ಜನ ಪ್ರದೇಶದಲ್ಲಿ ನೆಲಕ್ಕಪ್ಪಳಿಸಿದೆ. 2016ರಿಂದ ಈವರೆಗೆ ಭಾರತದ ಒಟ್ಟು 15 ಫೈಟರ್ ಜೆಟ್ ಮತ್ತು ಹೆಲಿಕಾಪ್ಟರ್ ಸೇರಿದಂತೆ ಒಟ್ಟು 27 ಏರ್‍ಕ್ರಾಫ್ಟ್‍ಗಳು ಪತನಗೊಂಡಿವೆ. ಹೆಚ್ಚಾಗಿ ಮಿಗ್ ವಿಮಾನಗಳೇ ಪತನಗೊಂಡಿದ್ದು ಇವುಗಳನ್ನು ಹಾರುವ ಶವಪೆಟ್ಟಿಗೆ ಎಂದೇ ಕರೆಯಲಾಗುತ್ತೆ. ಆದ್ರೆ ಇದೇ ಯುದ್ಧ ವಿಮಾನದಲ್ಲಿ ಅಭಿನಂದನ್ ವರ್ಧಮಾನ್ ಪಾಕಿಸ್ತಾನದ ಎಫ್-16 ವಿಮಾನವನ್ನು ಕುಟ್ಟಿ ಕೆಡವಿದ್ದರು ಅನ್ನೋದನ್ನ ಮರೆಯುವಂತಿಲ್ಲ.

Contact Us for Advertisement

Leave a Reply