12 ಕೆಜಿ ಬೆನ್ನಿಗೆ ಕಟ್ಟಿ, ನೀರಿನಲ್ಲಿ ಓಡಿದ 53 ವರ್ಷದ ನಟ..!

53 ವರ್ಷದ ನಟ ಮಿಲಿಂದ್ ಸೋಮನ್ ಇನ್ ಸ್ಟಾಗ್ರಾಂನಲ್ಲಿ ಒಂದು ಫೋಟೋ ಶೇರ್ ಮಾಡಿದ್ದಾರೆ. ನೀರಿನೊಳಗೆ 12 ಕೆಜಿ ತೂಕವನ್ನು ಬೆನ್ನಿಗೆ ಕಟ್ಟಿಕೊಂಡು ಓಡುತ್ತಿರುವ ಫೋಟೋ ಇದಾಗಿದೆ. ಈ ಬಗ್ಗೆ ಬರೆದುಕೊಂಡಿರೋ ಅವರು, ಸರಿಯಾದ ಸಿದ್ಧತೆ ಮೂಲಕ 12 ಕೆಜಿ ಬೆನ್ನಿಗೆ ಕಟ್ಟಿಕೊಂಡು ಐಸ್‍ಲ್ಯಾಂಡ್‍ನಲ್ಲಿ 10 ದಿನಗಳ ಹಿಂದೆ ನೀರಿನೊಳಗೆ ಓಡಿದ್ದೇನೆ. ನಿಮ್ಮ ಸಿದ್ಧತೆ ಸರಿಯಾಗಿದ್ದರೆ ಏಲ್ಲವೂ ಸಾಧ್ಯವಿದೆ. 2 ಡಿಗ್ರಿ ಸೆಲ್ಶಿಯಸ್ ವಾತಾವರಣದಲ್ಲೂ ನೀರಿನಲ್ಲಿ ಈಜಬಹುದು. ನಿಮ್ಮ ಗುರಿಯನ್ನು ಅರ್ಥ ಮಾಡಿಕೊಳ್ಳಿ, ನಿಮ್ಮ ಆದ್ಯತೆಯನ್ನು ಫಿಕ್ಸ್ ಮಾಡಿಕೊಳ್ಳಿ. ಆಗ ಎಲ್ಲವೂ ಸಾಧ್ಯ ಎಂದಿದ್ದಾರೆ.

https://www.instagram.com/p/B3ZFjVNHCJJ/?utm_source=ig_web_copy_link

Contact Us for Advertisement

Leave a Reply