ಮಿಂಟ್‌ ಸರ್ವೇ: ಪ್ರಧಾನಿ ಮೋದಿಗೆ 47% ವೋಟ್‌ ಷೇರಿಂಗ್

masthmagaa.com:

ಲೋಕಸಭಾ ಚುನಾವಣೆಗೆ ಕೆಲವೇ ವಾರಗಳು ಇರೋ ಬೆನ್ನಲ್ಲೇ ಸಂಸ್ಥೆಯೊಂದು ಪಕ್ಷಗಳ ವೋಟ್‌ಬ್ಯಾಂಕ್‌ ವಿಚಾರವಾಗಿ ಸರ್ವೇ ಒಂದನ್ನ ನಡೆಸಿದೆ. ಮಿಂಟ್‌ ಸಂಸ್ಥೆ ನಡೆಸಿರೋ ಈ ಸರ್ವೆಯಲ್ಲಿ ಬಿಜೆಪಿ ಮೂರನೇ ಬಾರಿಗೆ ಅಧಿಕಾರಕ್ಕೆ ಬರೋ ಸೂಚನೆ ನೀಡಿದೆ. ಯಾಕಂದ್ರೆ ಸರ್ವೇಯಲ್ಲಿ ಭಾಗವಹಿಸಿದ್ದ ಜನರ ಪೈಕಿ 47% ಜನ, ಅಂದ್ರೆ ಆಲ್ಮೋಸ್ಟ್‌ ಅರ್ಧದಷ್ಟು ಜನ ಬಿಜೆಪಿ ಕಡೆಗೆ ಒಲವಿರೋದಾಗಿ ಹೇಳಿದ್ದಾರೆ. 2023ರ ಮಧ್ಯಭಾಗದಲ್ಲಿ ನಡೆದಿದ್ದ ಸರ್ವೇಯಲ್ಲಿ ಬಿಜೆಪಿಗೆ 39% ವೋಟ್‌ ಷೇರಿಂಗ್‌ ಆಗುತ್ತೆ ಅಂತೇಳಲಾಗಿತ್ತು. ಆದ್ರೆ ಕೆಲವೇ ತಿಂಗಳಲ್ಲಿ, ಅಂದ್ರೆ ಡಿಸೆಂಬರ್‌ನಲ್ಲಿ ನಡೆಸಿರೋ ಸರ್ವೇ ಪ್ರಕಾರ ಪಕ್ಷಕ್ಕೆ 47% ವೋಟಿಂಗ್‌ ಆಗ್ಬೋದು ಅಂತ ಅಂದಾಜಿಸಲಾಗಿದೆ. ಸೊ ರಾಮಮಂದಿರ ಪ್ರಾಣಪ್ರತಿಷ್ಠಾಪನೆ ಸೇರಿ ಸರ್ಕಾರದ ಹಲವು ಕ್ರಮಗಳು ಮತದಾರರಿಗೆ ಇಂಪ್ಯಾಕ್ಟ್‌ ಮಾಡಿರೋದು ಕ್ಲಿಯರ್ರಾಗಿ ಗೊತ್ತಾಗ್ತಿದೆ. ಇನ್ನು ವಿರೋಧ ಪಕ್ಷ ಕಾಂಗ್ರೆಸ್‌ಗೆ ಇರೋ ಬ್ಯಾಡ್‌ ನ್ಯೂಸ್‌ ಏನಂದ್ರೆ, 10ರಲ್ಲಿ ಒಬ್ರು, ಅಂದ್ರೆ ಸುಮಾರು 11% ಜನರು ನಂಬಿಕೆ ಇಟ್ಟಿದ್ದು, ಕಾಂಗ್ರೆಸ್ ರೇಸ್‌ ಶುರುವಾಗೋ ಮುಂಚೇನೆ ಸೋತಿರೋ ತರ ಕಾಣ್ತಿದೆ.

-masthmagaa.com

Contact Us for Advertisement

Leave a Reply