masthmagaa.com:

ಭಾರತದ ಮಹಿಳಾ ಏಕದಿನ ಕ್ರಿಕೆಟ್​ ತಂಡದ ನಾಯಕಿ ಮಿಥಾಲಿ ರಾಜ್ ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ 10,000 ರನ್ ಪೂರೈಸಿದ ಭಾರತದ ಮೊದಲ ಮಹಿಳಾ ಕ್ರಿಕೆಟರ್ ಅನ್ನೋ ದಾಖಲೆ ಬರೆದಿದ್ದಾರೆ. ಅಂದ್ರೆ ಒಂಡೇ, ಟೆಸ್ಟ್​, ಟಿ-20 – ಎಲ್ಲಾ ಫಾರ್ಮ್ಯಾಟ್​ ಸೇರಿ 10 ಸಾವಿರ ರನ್. ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಒಂಡೇ ಮ್ಯಾಚ್​ನಲ್ಲಿ ಈ ಮೈಲಿಗಲ್ಲು ಸಾಧಿಸಿದ್ದಾರೆ. ಭಾರತದ ಪಾಲಿಗೆ ಮಿಥಾಲಿ ರಾಜ್​ ಮೊದಲಿಗರು. ಎಲ್ಲಾ ದೇಶಗಳನ್ನ ಪರಿಗಣಿಸಿದ್ರೆ ಎರಡನೇಯವರು. ಈ ಹಿಂದೆ ಇಂಗ್ಲೆಂಡ್ ತಂಡದ ಮಾಜಿ ನಾಯಕಿ ಚಾರ್ಲೊಟ್​ ಎಡ್ವರ್ಡ್ಸ್​ ಮೊದಲಿಗರಾಗಿ ಈ ದಾಖಲೆ ಮಾಡಿದ್ದರು. ಸದ್ಯ 10,273 ರನ್​ಗಳೊಂದಿಗೆ ಅವರು ಅತಿಹೆಚ್ಚು ರನ್​​ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಮಿಥಾಲಿ ರಾಜ್ ಎರಡನೇ ಸ್ಥಾನದಲ್ಲಿದ್ದಾರೆ.

-masthmagaa.com

Contact Us for Advertisement

Leave a Reply