ಕಾಶ್ಮೀರದಲ್ಲಿ ಬಿಲ್ ಕಟ್ಟದ್ದಕ್ಕೆ ಸಾವಿರಾರು ಜನರ ಮೊಬೈಲ್ ಸಂಪರ್ಕವೇ ಕಟ್​..!

ಜಮ್ಮು ಕಾಶ್ಮೀರದಲ್ಲಿ ಬರೋಬ್ಬರಿ 72 ದಿನಗಳ ಬಳಿಕ ಫೋನ್​ ಸದ್ದು ಮಾಡಿದ್ದರಿಂದ ಕಾಶ್ಮೀರ ಜನರಿಗೆ ಫುಲ್ ಖುಷಿಯಾಗಿತ್ತು. ಭಾನುವಾರ ಈ ಬಗ್ಗೆ ಮಾಹಿತಿ ನೀಡಿದ್ದ ಸರ್ಕಾರ ಸೋಮವಾರದಿಂದ ಸುಮಾರು 40 ಲಕ್ಷ ಪೋಸ್ಟ್​ ಪೇಯ್ಡ್​ ಮೊಬೈಲ್ ಫೋನ್ ಸಂಪರ್ಕ ಪುನಃ ಶುರುವಾಗಲಿದೆ ಎಂದು ಹೇಳಿತ್ತು. ಆದ್ರೆ ತುಂಬಾ ದಿನಗಳವರೆಗೆ ಬಿಲ್ ನೀಡದೇ ಇರೋದ್ರಿಂದ ಸಾವಿರಾರು ಗ್ರಾಹಕರ ಮೊಬೈಲ್ ಸಂಪರ್ಕವನ್ನು ಕಂಪನಿಗಳು ಕಡಿತಗೊಳಿಸಿವೆ. ಇಷ್ಟುದಿನಗಳ ಕಾಲ ಮೊಬೈಲ್ ಸೇವೆಯೇ ಇರಲಿಲ್ಲ. ನಾವು ಬಿಲ್ ಕಟ್ಟೋದಾದ್ರೂ ಹೇಗೆ ಎಂದು ಜನ ಕಂಗಾಲಾಗಿ ಹೋಗಿದ್ದಾರೆ.

ಇದಲ್ಲದೆ ಜಮ್ಮು ಕಾಶ್ಮೀರದಲ್ಲಿ ಇನ್ನೂ 20 ಲಕ್ಷ ಪ್ರೀಪೇಯ್ಡ್​ ಮೊಬೈಲ್​ಗಳ ಸಂಪರ್ಕ ಇನ್ನೂ ಶುರುವಾಗಿಲ್ಲ. ಇಂಟರ್ನೆಟ್ ಸೇವೆ ಮೇಲಿನ ನಿರ್ಬಂಧ ಕೂಡ ಇನ್ನೂ ಶುರುವಾಗಿಲ್ಲ.

ಜಮ್ಮು ಕಾಶ್ಮೀರದಲ್ಲಿ ನಿರ್ಬಂಧ ಹೇರಿದ್ದು ಗೊತ್ತಿದ್ರೂ ಟೆಲಿಕಾಂ ಕಂಪನಿಗಳು ಯಾವುದೇ ರಿಯಾಯಿತಿ ನೀಡಿಲ್ಲ. ಅಲ್ಲದೆ ಬಿಲ್ ಪಾವತಿಸಿಲು ಯಾವುದೇ ವ್ಯವಸ್ಥೆಯನ್ನೂ ಕಲ್ಪಿಸಿಲ್ಲ.

Contact Us for Advertisement

Leave a Reply