ನಿರಾಶ್ರಿತ ಕಾಶ್ಮೀರಿಗಳಿಗೆ ಐದೂವರೆ ಲಕ್ಷ ರೂಪಾಯಿ..!

ಮೋದಿ ಸರ್ಕಾರ ಪಾಕ್ ಆಕ್ರಮಿತ ಕಾಶ್ಮೀರದಿಂದ ಬಂದು ದೇಶದ ವಿವಿಧ ರಾಜ್ಯಗಳಲ್ಲಿ ನೆಲೆಸಿರುವ ಕಾಶ್ಮೀರಿಗಳಿಗೆ ದೀಪಾವಳಿ ಗಿಫ್ಟ್ ಕೊಟ್ಟಿದೆ. ಸುಮಾರು 5 ಸಾವಿರ ಕುಟುಂಬಗಳಿಗೆ ತಲಾ ಐದೂವರೆ ಲಕ್ಷ ರೂಪಾಯಿ ಸಹಾಯ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಮೂಲಕ ಕಾಶ್ಮೀರಿಗಳು ಮತ್ತೆ ಕಾಶ್ಮೀರಕ್ಕೆ ಬಂದು ನೆಲೆಸಲು ಸಾಧ್ಯವಾಗುವಂತೆ ಸಹಾಯ ಮಾಡಲಾಗಿದೆ. ಇವರಲ್ಲಿ ಮೂರು ರೀತಿಯ ಕುಟುಂಬಗಳಿವೆ. ಮೊದಲನೆಯದಾಗಿ 1947ರಲ್ಲಿ ಭಾರತ ವಿಭಜನೆ ವೇಳೆ ಬಂದವರು, ಬಲವಂತವಾಗಿ ಕಳುಹಿಸಲ್ಪಟ್ಟವರು ಮತ್ತು ಪಾಕ್ ಆಕ್ರಮಿತ ಕಾಶ್ಮೀರದಿಂದ ಬಂದವರು ಸೇರಿದ್ದಾರೆ.

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಈಗಷ್ಟೇ ಪರಿಸ್ಥಿತಿ ಸಹಜ ಸ್ಥಿತಿಯತ್ತ ಮರಳುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

Contact Us for Advertisement

Leave a Reply