ಏಕತಾ ಪ್ರತಿಮೆಗೆ ಗೌಡರ ಭೇಟಿ.. `ನಮೋ’ ಫುಲ್ ಖುಷ್

ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಗುಜರಾತ್‍ನ ಸರ್ದಾರ್ ವಲ್ಲಭ ಭಾಯಿ ಪಟೇಲರ ಏಕತಾ ಪ್ರತಿಮೆ ವೀಕ್ಷಿಸಿದ್ದಾರೆ. ಈ ಬಗ್ಗೆ ಟ್ವಿಟ್ಟರ್‍ನಲ್ಲಿ ಫೋಟೋಗಳನ್ನು ಹಾಕಿರುವ ಮಾಜಿ ಪ್ರಧಾನಿ ದೇವೇಗೌಡ್ರು, ಸರ್ದಾರ್ ಸರೋವರ ಅಣೆಕಟ್ಟೆಯ ಬಳಿ ನಿರ್ಮಿಸಿರುವ ಏಕತಾ ಪ್ರತಿಮೆಗೆ ಭೇಟಿ ನೀಡಿದ ಸಂದರ್ಭ ಎಂದು ಬರೆದುಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರೋ ಪ್ರಧಾನಿ ನರೇಂದ್ರ ಮೋದಿ, ಏಕತಾ ಪ್ರತಿಮೆಗೆ ನಮ್ಮ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಭೇಟಿ ನೀಡಿರುವುದು ಸಂತೋಷ ತಂದಿದೆ ಅಂತ ಟ್ವೀಟ್ ಮಾಡಿದ್ದಾರೆ. ಸರ್ದಾರ್ ಸರೋವರ ಅಣೆಕಟ್ಟು ಕೆವೆಡಿಯಾದಲ್ಲಿದ್ದು, ಅದಕ್ಕೆ ಅಭಿಮುಖವಾಗಿ ಪಟೇಲರ ಏಕತಾ ಪ್ರತಿಮೆ ಇದೆ.

Contact Us for Advertisement

Leave a Reply