ಮೋದಿ ಸರ್ಕಾರದ ಹೊಸ ರೂಲ್ಸ್..! ಟೆನ್ಶನ್‍ನಲ್ಲಿ ರಾಗಾ, ಸೋನಿಯಾ..!

ಎಸ್‍ಪಿಜಿ, ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ ಸೌಲಭ್ಯ ಪಡೆದಿರೋ ನಾಯಕರಿಗೆ ಮೋದಿ ಸರ್ಕಾರ ಹೊಸ ರೂಲ್ಸ್ ಜಾರಿ ಮಾಡಿದೆ. ಎಸ್‍ಪಿಜಿ ಭದ್ರತೆ ಪಡೆದಿರೋ ಯಾವುದೇ ನಾಯಕರು ವಿದೇಶ ಪ್ರವಾಸ ಕೈಗೊಳ್ಳಬೇಕಾದ್ರೂ ಎಸ್‍ಪಿಜಿ ತಂಡವನ್ನು ಜೊತೆಗೆ ಕರೆದೊಯ್ಯಬೇಕು. ಇಲ್ಲವಾದಲ್ಲಿ ಅವರ ವಿದೇಶ ಯಾತ್ರೆಯನ್ನೇ ರದ್ದುಪಡಿಸಲಾಗುತ್ತೆ ಎಂದು ಎಚ್ಚರಿಸಲಾಗಿದೆ.

ಸದ್ಯ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಗೆ ಈ ಸೌಲಭ್ಯ ನೀಡಲಾಗಿದೆ.

ಪ್ರಧಾನಿ ಮತ್ತು ಮಾಜಿ ಪ್ರಧಾನಿ ಮತ್ತವರ ಕುಟುಂಬದ ರಕ್ಷಣೆಗಾಗಿಯೇ ವಿಶೇಷ ಭದ್ರತಾ ಪಡೆಯನ್ನು ಸ್ಥಾಪಿಸಲಾಗಿತ್ತು. ಆದ್ರೆ ಸ್ವಲ್ಪ ಸಮಯದ ಹಿಂದಷ್ಟೇ ಮನಮೋಹನ್ ಸಿಂಗ್ ಅವರಿಗೆ ಯಾವುದೇ ಬೆದರಿಕೆ ಇಲ್ಲ. ಹೀಗಾಗಿ ಅವರ ವಿಶೇಷ ಭದ್ರತಾ ಪಡೆಯನ್ನು ವಾಪಸ್ ಪಡೆಯಲಾಗುವುದು ಎಂದು ಸರ್ಕಾರ ಹೇಳಿತ್ತು.

Contact Us for Advertisement

Leave a Reply