150ನೇ ಗಾಂಧಿಜಯಂತಿ.. ಪ್ಲಾಸ್ಟಿಕ್ ವಿರುದ್ಧ ಯುದ್ಧ ಶುರು..

ಇವತ್ತು ದೇಶಾದ್ಯಂತ ಮಹಾತ್ಮಾ ಗಾಂಧೀಜಿಯವರ 150ನೇ ಜಯಂತಿಯನ್ನು ಆಚರಿಸಲಾಗುತ್ತಿದೆ. 5 ವರ್ಷದ ಹಿಂದೆ ಇದೇ ದಿನ ಸ್ವಚ್ಛ ಭಾರತ್ ಅಭಿಯಾನ ಶುರುವಾಗಿತ್ತು. ಅದು ಸಾಕಷ್ಟು ಮಟ್ಟಿಗೆ ಯಶಸ್ವಿಯಾಗಿದ್ದು, ಇವತ್ತು ಅದ್ರ ಜೊತೆ ಈಗ ಪ್ಲಾಸ್ಟಿಕ್ ಬಳಕೆ ನಿಲ್ಲಿಸುವ ಅಭಿಯಾನಕ್ಕೆ ಚಾಲನೆ ಸಿಗಲಿದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿಯವರು ಆಗಸ್ಟ್ 15ರ ಸ್ವಾತಂತ್ರ್ಯ ದಿನದ ಭಾಷಣ ಮತ್ತು ಆಗಸ್ಟ್ ತಿಂಗಳ ಮನ್ ಕಿ ಬಾತ್‍ನಲ್ಲಿ ಈ ಅಭಿಯಾನದ ಬಗ್ಗೆ ಪ್ರಸ್ತಾಪಿಸಿದ್ದು ಬೆಂಬಲ ವ್ಯಕ್ತವಾಗಿದೆ. ಅಂದ್ರೆ ಪ್ಲಾಸ್ಟಿಕ್ ವಸ್ತುಗಳ ಮೇಲೆ ಸರ್ಕಾರ ಸಂಪೂರ್ಣ ನಿಷೇಧ ಹೇರುತ್ತಿಲ್ಲ. ಬದಲಾಗಿ ಸಿಂಗಲ್ ಯೂಸ್ ಪ್ಲಾಸ್ಟಿಕ್ ಅಂದ್ರೆ ಒಮ್ಮೆ ಉಪಯೋಗಿಸಿ ಎಸೆಯೋ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸುವಂತೆ ಅಭಿಯಾನ ಶುರು ನಡೆಸಲಿದೆ. ಈ ಮೂಲಕ ರಾಜ್ಯಗಳಲ್ಲಿ ಈಗಾಗಲೇ ಇರೋ ತೆಳು ಪ್ಲಾಸ್ಟಿಕ್ ಮಾರಾಟ ಮತ್ತು ಬಳಕೆ ಮೇಲೆ ನಿಷೇಧ ಹೇರಲಾಗಿದೆ. ಹಾಗೂ ಅಂಗಡಿಗಳಲ್ಲಿ ಪೇಪರ್ ಮತ್ತು ಬಟ್ಟೆಯ ಬ್ಯಾಗ್‍ಗಳನ್ನು ನೀಡಲಾಗುತ್ತಿದೆ.

ಇನ್ನು ಇವತ್ತು ಬೆಳಗ್ಗೆ ರಾಜ್‍ಘಾಟ್‍ನಲ್ಲಿರೋ ಗಾಂಧಿ ಸಮಾಧಿಗೆ ಹಿರಿಯ ನಾಯಕರು ಭೇಟಿ ನೀಡಿ ನಮಿಸಿದ್ರು. ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಮನಮೋಹನ್ ಸಿಂಗ್, ಎಲ್.ಕೆ ಅಡ್ವಾಣಿ ಸೇರಿದಂತೆ ಹಲವರು ಭಾಗಿಯಾಗಿದ್ದರು.

Contact Us for Advertisement

Leave a Reply