ಮುಂಬೈ ದಾಳಿಗೆ 13 ವರ್ಷ! ಪ್ರಧಾನಿ ಮೋದಿ ಹೇಳಿದ್ದೇನು?

masthmagaa.com:

26/11ರ ಮುಂಬೈ ದಾಳಿ ನಡೆದು ಇವತ್ತಿಗೆ 13 ವರ್ಷ.. 2008ರಲ್ಲಿ ಇದೇ ದಿನ 10 ಮಂದಿ ಉಗ್ರರು ಮುಂಬೈನಲ್ಲಿ ದಾಳಿ ನಡೆಸಿ, 15 ದೇಶಗಳ 166 ಮಂದಿಯನ್ನು ಬಲಿ ಪಡ್ಕೊಂಡಿದ್ರು. 300 ಜನ ಗಾಯಗೊಂಡಿದ್ರು. ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಎಲ್ಲಾ ಜನ ಮತ್ತು ಹುತಾತ್ಮರಾದ ಭದ್ರತಾ ಸಿಬ್ಬಂದಿಗೆ ಶ್ರದ್ಧಾಂಜಲಿ ಅರ್ಪಿಸ್ತೀನಿ. ಭಾರತ 2008ರ ಮುಂಬೈ ದಾಳಿಯ ಗಾಯವನ್ನು ಯಾವತ್ತು ಮರೆಯೋದಿಲ್ಲ. ಈಗ ಭಾರತ ಹೊಸ ದಾರಿ ಮತ್ತು ಹೊಸ ನೀತಿಯೊಂದಿಗೆ ಉಗ್ರರನ್ನು ಎದುರಿಸುತ್ತಿದ್ದೀವಿ ಅಂತ ಹೇಳಿದ್ದಾರೆ. ಇನ್ನು ಪಾಕಿಸ್ತಾನ ಹೈಕಮಿಷನ್​​​ನ ಹಿರಿಯ ರಾಜತಾಂತ್ರಿಕರನ್ನು ಕರೆಸಿ, ಪ್ರಕರಣದ ತ್ವರಿತ ತನಿಖೆಗೆ ಸೂಚಿಸಲಾಯ್ತು. ಜೊತೆಗೆ ಭಾರತದ ವಿರುದ್ಧ ಭಯೋತ್ಪಾದನೆಗೆ ಪಾಕಿಸ್ತಾನ ತನ್ನ ನೆಲವನ್ನು ಬಳಸಲು ಬಿಡೋದಿಲ್ಲ ಅನ್ನೋ ವಿಚಾರಕ್ಕೆ ಬದ್ಧವಾಗಿರುವಂತೆ ಒತ್ತಾಯಿಸಲಾಗಿದೆ.

-masthmagaa.com:

 

Contact Us for Advertisement

Leave a Reply