ಅಮೆರಿಕಾ ಸಂಸದನ ಪತ್ನಿ ಬಳಿ ಮೋದಿ ಕ್ಷಮೆಯಾಚನೆ..!

ಅಮೆರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅಮೆರಿಕಾ ಸಂಸದರೊಬ್ಬರ ಪತ್ನಿ ಬಳಿ ಕ್ಷಮೆಯಾಚಿಸಿದ್ದಾರೆ. ಟೆಕ್ಸಸ್‍ನ ಸೆನೆಟರ್ ಜಾನ್ ಕಾರ್ನರ್ ಅವರ ಪತ್ನಿಗೆ ಸಾರ್ರಿ ಹೇಳಿದ್ದಾರೆ. ಕಾರ್ನಿನ್ ಅವರ ಪತ್ನಿ ಸ್ಯಾಂಡಿಯಾ 60ನೇ ವರ್ಷದ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಆದ್ರೆ ಅವರ ಪತಿ ಜಾನ್ ಕಾರ್ನಿನ್ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದರು. ಅಲ್ಲದೆ ಪ್ರಧಾನಿ ಮೋದಿ ಜೊತೆಯೇ ಇಡೀ ದಿನ ಕಳೆದಿದ್ದರು. ಇದು ತಿಳಿದ ಪ್ರಧಾನಿ ಮೋದಿ, ಜಾನ್ ಕಾರ್ನಿನ್ ಅವರ ಪತ್ನಿ ಬಳಿ ಕ್ಷಮೆ ಕೇಳಿದ್ದಾರೆ.

ಸ್ಯಾಂಡಿ ನಿಮ್ಮ ಬಳಿ ಕ್ಷಮೆಯಾಚಿಸಲು ಬಯಸುತ್ತೇನೆ. ಯಾಕೆಂದರೆ ಇವತ್ತು ನಿಮ್ಮ ಹುಟ್ಟುಹಬ್ಬ. ಆದ್ರೆ ನಿಮ್ಮ ಗ್ರೇಟ್ ಲೈಫ್ ಪಾರ್ಟ್‍ನರ್ ನಮ್ಮ ಜೊತೆಗಿದ್ದಾರೆ. ನೈಸರ್ಗಿಕವಾಗಿ ನಿಮಗೆ ಇವತ್ತು ಹೊಟ್ಟೆಕಿಚ್ಚಾಗಿರುತ್ತೆ. ಆದ್ರೆ ನಿಮಗೆ ಶುಭ ಹಾರೈಸುತ್ತೇನೆ. ಸಂತೋಷಭರಿತ, ಸಮೃದ್ಧಯುತ ಭವಿಷ್ಯ ನಿಮ್ಮದಾಗಿಲಿ ಅಂತ ಬಯಸುತ್ತೇನೆ ಎಂದು ಹೇಳಿದ್ದಾರೆ.

Contact Us for Advertisement

Leave a Reply