ಮೋದಿ, ಸೋನಿಯಾ, ರಾಹುಲ್, ಡಿಕೆಶಿ ಯಾರ ಆಸ್ತಿ ಜಾಸ್ತಿ..?

ಡಿಕೆಶಿ ಆಸ್ತಿ ಬಗ್ಗೆ ಗಲ್ಲಿಯಿಂದ ಹಿಡಿದು ದಿಲ್ಲಿವರೆಗೆ ಭಾರೀ ಚರ್ಚೆಯಾಗುತ್ತಿದೆ. ಡಿಕೆ ಶಿವಕುಮಾರ್ ಆಸ್ತಿ ಬರಿ 840 ಕೋಟಿಯಲ್ಲ. ಅದರಾಚೆಗೂ ಅವರ ದುಡ್ಡಿನ ಸಾಮ್ರಾಜ್ಯ ವಿಸ್ತರಿಸಿದೆ ಅಂತ ಇಡಿ ಅಧಿಕಾರಿಗಳು ಹೇಳ್ತಿದ್ದಾರೆ. ಡಿಕೆಶಿ ಬಳಿ 840 ಕೋಟಿ ಆಸ್ತಿ ಇದ್ದರೆ.. ಮೋದಿ ಬಳಿ ಇರೋ ಆಸ್ತಿ ಎಷ್ಟು..? ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಎಷ್ಟು ದುಡ್ಡು ಮಾಡಿದ್ದಾರೆ ಗೊತ್ತಾ..? ಸೋನಿಯಾ ಪುತ್ರ ರಾಹುಲ್ ಗಾಂಧಿ ಎಷ್ಟು ಕೋಟಿಗೆ ಒಡೆಯ..? ಈ ಇಂಟರೆಸ್ಟಿಂಗ್ ಮಾಹಿತಿಯನ್ನ ನಾವು ನಿಮ್ಗೆ ಹೇಳ್ತಾ ಹೋಗ್ತೀವಿ. ಫುಲ್ ಓದಿ..

ಫ್ರೆಂಡ್ಸ್.. ನಿಮಗೆಲ್ಲಾ ಅನಿಸಿರಬಹುದು ದೇಶದ ಪ್ರಧಾನಿಯಾಗಿರುವ ಮೋದಿ ಆಸ್ತಿ ಎಷ್ಟಿರಬಹುದು ಅಂತ. ಅಟ್ ದಿ ಸೇಮ್ ಟೈಮ್ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯ ಆಸ್ತಿ ಬಗ್ಗೆಯೂ ಪ್ರಶ್ನೆ ಮೂಡಿರಬಹುದು. ಈ ಮೂವರಲ್ಲಿ ಯಾರು ಶ್ರೀಮಂತರು..? ಯಾರು ಬಡವರು ಅಂತ ಮುಂದಕ್ಕೆ ಹೇಳ್ತೀವಿ ನೋಡಿ.

11.82 ಕೋಟಿ ಆಸ್ತಿಯ ಒಡತಿ ಸೋನಿಯಾ
ಸೋನಿಯಾ ಗಾಂಧಿ ಬಳಿ ಬರೋಬ್ಬರಿ 11.82 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದೆ. ಅಂದ್ರೆ ಡಿಕೆಶಿ ಆಸ್ತಿಯ ಕೇವಲ 1.5 ಪಸೆರ್ಂಟ್ ಮಾತ್ರ. ಅಂದ್ಹಾಗೆ 2019ರಲ್ಲಿ ರಾಯ್ ಬರೇಲಿ ಕ್ಷೇತ್ರದಿಂದ ಕಣಕ್ಕಿಳಿದ ಸೋನಿಯಾ ಗಾಂಧಿ ನಾಮಪತ್ರ ಸಲ್ಲಿಸುವಾಗ ತಮ್ಮ ಬಳಿ 11.82 ಕೋಟಿ ಮೌಲ್ಯದ ಆಸ್ತಿ ಬಗ್ಗೆ ಘೋಷಿಸಿಕೊಂಡಿದ್ರು. 2014ರಲ್ಲಿ ಇದೇ ಸೋನಿಯಾ ಗಾಂಧಿ ಆಸ್ತಿ 9.28 ಕೋಟಿಯಷ್ಟಿತ್ತು. ಇದು ಸೋನಿಯಾ ಗಾಂಧಿ ಆಸ್ತಿ ಆಯ್ತು. ಹಾಗಾದ್ರೆ ರಾಹುಲ್ ಗಾಂಧಿ ಆಸ್ತಿ ಎಷ್ಟು ಅಂತ ನೋಡ್ತಾ ಹೋಗೋಣ.

ಅಮ್ಮನಿಗಿಂತ ಶ್ರೀಮಂತನಾಗಿದ್ದಾನೆ ಮಗ!
ರಾಹುಲ್ ಬಳಿ ಇದೆ 15.88 ಕೋಟಿ ಆಸ್ತಿ!
ತಾಯಿ ಸೋನಿಯಾ ಗಾಂಧಿಗಿಂತ ಪುತ್ರ ರಾಹುಲ್ ಗಾಂಧಿ ಶ್ರೀಮಂತರಾಗಿದ್ದಾರೆ. ಕನ್ನಡ ಲೋಕಸಭಾ ಚುನಾವಣೆಗೆ ವಯನಾಡು ಕ್ಷೇತ್ರದಿಂದ ಸ್ಪರ್ಧಿಸಿದ್ದ ರಾಹುಲ್ ಗಾಂಧಿ ತಮ್ಮ ಬಳಿ 15.88 ಕೋಟಿ ಮೌಲ್ಯದ ಆಸ್ತಿಯಿದೆ ಅಂತ ಘೋಷಿಸಿಕೊಂಡಿದ್ದರು. ಇದು ಅವರ ತಾಯಿಯ ಆಸ್ತಿಗಿಂತ 4 ಕೋಟಿ ಹೆಚ್ಚು. ಅಂದಹಾಗೆ 2019ರಲ್ಲಿ 15.88 ಕೋಟಿ ಆಸ್ತಿ ಹೊಂದಿರುವ ರಾಹುಲ್ ಗಾಂಧಿ, 2014ರಲ್ಲಿ 9.4 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದರು. ಅಂದ್ರೆ ಬರೀ ಐದು ವರ್ಷದಲ್ಲಿ ರಾಹುಲ್ ಆಸ್ತಿ ಆರು ಕೋಟಿಯಷ್ಟು ಹೆಚ್ಚಾಗಿದೆ. ಇದೆಷ್ಟು ಸೋನಿಯಾ ಹಾಗೂ ರಾಹುಲ್ ಗಾಂಧಿ ಆಸ್ತಿ ಬಗ್ಗೆ ಮಾಹಿತಿ. ಹಾಗಾದ್ರೆ ಪ್ರಧಾನಿ ಮೋದಿ ಆಸ್ತಿ ಎಷ್ಟು..? ಮೋದಿ ಆಸ್ತಿ ಸೋನಿಯಾ ಹಾಗೂ ರಾಹುಲ್ ಗಿಂತ ಹೆಚ್ಚೋ, ಕಮ್ಮಿಯೋ ಅಂತ ನೋಡ್ತಾ ಹೋಗೋಣ.

ಎಷ್ಟು ಆಸ್ತಿ ಮಾಡಿದ್ದಾರೆ ಪ್ರಧಾನಿ ಮೋದಿ..?
ನಿಮಗೆಲ್ಲ ಗೊತ್ತಿರೋ ಹಾಗೆ ಮೋದಿ ಬಡ ಕುಟುಂಬದಿಂದ ಬಂದ ವ್ಯಕ್ತಿ. ಚಿಕ್ಕವರಿದ್ದಾಗ ರೈಲ್ವೆ ಸ್ಟೇಷನ್ ನಲ್ಲಿ ಟೀ ಮಾಕೊರ್ಂಡು.. ಬಳಿಕ ಗುಜರಾತ್ ಸಿಎಂ ಆಗಿ.. ನಂತರ ದೇಶದ ಪ್ರಧಾನಿಯಾದ ವ್ಯಕ್ತಿ. ಇಷ್ಟೆಲ್ಲಾ ಸಾಧನೆ ಮಾಡಿದ ದೇಶದ ಪವರ್ಫುಲ್ ವ್ಯಕ್ತಿ ಮೋದಿ ಬಳಿ ಇರೋದು ಬರೀ 2.51 ಕೋಟಿ ಮೌಲ್ಯದ ಆಸ್ತಿ ಮಾತ್ರ. ಇದು ಡಿಕೆಶಿಯ 840 ಕೋಟಿ ಆಸ್ತಿಯ ಒಂದು ಪಸೆರ್ಂಟ್ ಕೂಡ ಅಲ್ಲ. ಬರೀ ಕಾಲು ಪಸೆರ್ಂಟ್ ಅಂದ್ರೆ ನೀವು ನಂಬಲೇಬೇಕು.

ಫ್ರೆಂಡ್ಸ್ ಇದಿಷ್ಟು ಪ್ರಧಾನಿ ಮೋದಿ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ತಮ್ಮ ಆಸ್ತಿ ವಿವರ. ಆದರೆ ಇದೆಲ್ಲಾ ಇವರು ಘೋಷಿಸಿಕೊಂಡ ಆಫೀಶಿಯಲ್ ಆಸ್ತಿ.

Contact Us for Advertisement

Leave a Reply