ವಿಶ್ವಸಂಸ್ಥೆಯಲ್ಲಿಂದು ಮೋದಿ ಹವಾ..! ಭಾಷಣಕ್ಕೆ ಕೌಂಟ್ ಡೌನ್

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 74ನೇ ಮಹಾಧಿವೇಶನ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಇವತ್ತು ಭಾಷಣ ಮಾಡಲಿದ್ದಾರೆ. ಇನ್ನೊಂದು ವಿಶೇಷ ಅಂದ್ರೆ ಪ್ರಧಾನಿ ಮೋದಿ ಬಳಿಕ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕೂಡ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಶ್ಮೀರ ವಿಚಾರ ಭಾರಿ ಸುದ್ದಿಯಲ್ಲಿರುವಾಗಲೇ ಎರಡೂ ದೇಶದ ಪ್ರಧಾನಿಗಳ ಭಾಷಣದತ್ತ ಎಲ್ಲರ ಗಮನ ನೆಟ್ಟಿದೆ. ಈಗಾಗಲೇ ಸಾಮಾನ್ಯ ಸಭೆಯ ಭಾಷಣದಲ್ಲಿ ಕಾಶ್ಮೀರ ವಿಚಾರ ಪ್ರಸ್ತಾಪಿಸೋದಾಗಿ ಪಾಕಿಸ್ತಾನ ಹೇಳಿದೆ. ಆದ್ರೆ ಪ್ರಧಾನಿ ಮೋದಿ ಜಾಗತಿಕ ನಿರೀಕ್ಷೆಗಳು ಮತ್ತು ಭಾರತದ ಪಾತ್ರ ಕುರಿತು ಭಾಷಣ ಮಾಡಲಿದ್ದಾರೆ. ಜೊತೆಗೆ ಅಭಿವೃದ್ಧಿ, ಭದ್ರತೆ, ಶಾಂತಿ ಮತ್ತು ಇತರ ಉನ್ನತ ವಿಷಯಗಳ ಕುರಿತು ಭಾರತದ ನಿರೀಕ್ಷೆಗಳೇನು ಅಂತ ಸಾಮಾನ್ಯ ಸಭೆಯಲ್ಲಿ ತಿಳಿಸಲಿದ್ದಾರೆ ಎಂದು ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ. 2014ರಲ್ಲಿ ಮೊದಲ ಬಾರಿಗೆ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡಿದ್ದ ಮೋದಿ, ಈಗ 2ನೇ ಬಾರಿಗೆ ಮಾತನಾಡ್ತಿದ್ದಾರೆ. 7ನೇ ಗಣ್ಯರಾಗಿ ಮೋದಿ ಮಾತನಾಡಲಿದ್ದು, ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 8.30ರಿಂದ 9 ಗಂಟೆವರೆಗೆ ಅವರು ಮಾತನಾಡಲಿದ್ದಾರೆ.

Contact Us for Advertisement

Leave a Reply