ಇಂಡೋ-ಚೀನೀ ಭಾಯಿ ಭಾಯಿ..! ಮುಗಿಯುತ್ತಾ ಸಂಘರ್ಷ..?

ಭಾರತಕ್ಕೆ 2 ದಿನಗಳ ಪ್ರವಾಸ ಕೈಗೊಂಡಿದ್ದ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಮತ್ತು ಪ್ರಧಾನಿ ನರೇಂದ್ರ ಮೋದಿ ಮಾಮಲ್ಲಾಪುರಂನಲ್ಲಿ ಮಾತುಕತೆ ನಡೆಸಿದ್ರು. ಭಾರತ-ಚೀನಾ ನಡುವಣ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿ, ಎರಡೂ ದೇಶಗಳು ಪರಸ್ಪರ ಸಹಕಾರ ನೀಡಲು ಸಮ್ಮತಿಸಿವೆ. ವ್ಯಾಪಾರ, ಹೂಡಿಕೆಗೆ ಉತ್ತೇಜನ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಸಹಕಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಷಿ ಜಿನ್‍ಪಿಂಗ್ ಒಪ್ಪಿದ್ದಾರೆ. ಇನ್ನೊಂದು ವಿಚಾರ ಅಂದ್ರೆ ಉಗ್ರ ನಿಗ್ರಹ ಹಾಗೂ ಉಗ್ರ ಪೋಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಉಭಯ ನಾಯಕರು ಅಸ್ತು ಎಂದಿದ್ದಾರೆ. ಇದು ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸೋ ಎಲ್ಲಾ ಸಾಧ್ಯತೆ ಇದೆ. ಇನ್ನು ಭದ್ರತೆಯಲ್ಲಿ ಸಹಕಾರದ ಜೊತೆಗೆ ಗಡಿಯಲ್ಲಿ ಶಾಂತಿ ಪಾಲನೆಗೂ ಒಪ್ಪಿಗೆ ಸೂಚಿಸಲಾಗಿದೆ. ದ್ವಿಪಕ್ಷೀಯ ವ್ಯಾಪಾರದಲ್ಲಿ ಭಾರತದ ವ್ಯಾಪಾರ ಕೊರತೆ ಹೆಚ್ಚುತ್ತಲೇ ಇದೆ. ಇದನ್ನು ನಿಭಾಯಿಸಲು ಸಹಕಾರ ನೀಡುವ ಭರವಸೆಯನ್ನು ಚೀನಾ ನೀಡಿದೆ.

ಇದೇ ವೇಳೆ ಮಾತನಾಡಿದ ಪ್ರಧಾನಿ ಮೋದಿ, ನಮ್ಮ ನಡುವಣ ಭಿನ್ನಮತಗಳನ್ನು ಬುದ್ಧಿವಂತಿಕೆಯಿಂದ ನಿಭಾಯಿಸಲು ಮತ್ತು ದೊಡ್ಡ ವಿವಾದಗಳಾಗದಂತೆ ನೋಡಿಕೊಳ್ಳಲು ನಿರ್ಧರಿಸಿದ್ದೇವೆ. ಪರಸ್ಪರ ಕಾಳಜಿ ಬಗ್ಗೆ ಸಂವೇದನೆ ಬೆಳೆಸಿಕೊಳ್ಳಲು ನಿರ್ಧರಿಸಿದ್ದೇವೆ ಎಂದಿದ್ದಾರೆ.

Contact Us for Advertisement

Leave a Reply