ಆಸ್ಟ್ರೇಲಿಯಾದಿಂದ ಬಂದ ಕೂಡಲೇ ತಂದೆ ಸಮಾಧಿ ಬಳಿ ಹೋದ ಸಿರಾಜ್​!

masthmagaa.com:

ಆಸ್ಟ್ರೇಲಿಯಾದಲ್ಲಿ ಐತಿಹಾಸಿಕ ಟೆಸ್ಟ್​ ಸರಣಿ ಗೆದ್ದ ಟೀಂ ಇಂಡಿಯಾ ಆಟಗಾರರು ಇವತ್ತು ತಾಯ್ನಾಡಿಗೆ ವಾಪಸ್ ಆಗಿದ್ದಾರೆ. ವೇಗಿ ಮೊಹಮ್ಮದ್ ಸಿರಾಜ್​ ಹೈದ್ರಾಬಾದ್​ ಏರ್​​ಪೋರ್ಟ್​ನಲ್ಲಿ ಲ್ಯಾಂಡ್​ ಆಗ್ತಿದ್ದಂತೇ ತಮ್ಮ ತಂದೆ ಸಮಾಧಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾಗ ಸಿರಾಜ್​ ತಂದೆ ಇಹಲೋಕ ತ್ಯಜಿಸಿದ್ದರು. ಸಿರಾಜ್​ಗೆ ಭಾರತಕ್ಕೆ ಬರಲು ಅವಕಾಶ ಕೊಟ್ಟರೂ ಅವರು ಬಂದಿರಲಿಲ್ಲ. ಇವತ್ತು ಏರ್​ಪೊರ್ಟ್​ನಿಂದ ಸೀದಾ ತಂದೆ ಸಮಾಧಿ ಬಳಿ ಪುಷ್ಪ ನಮನ ಸಲ್ಲಿಸಿ ಪ್ರಾರ್ಥನೆ ಮಾಡಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಸಿರಾಜ್, ಸರಣಿಯಲ್ಲಿ ಭಾರತದ ಪರ ಅತಿಹೆಚ್ಚು 13 ವಿಕೆಟ್​ ಪಡೆದು ಮಿಂಚಿದ್ರು.

-masthmagaa.com

Contact Us for Advertisement

Leave a Reply