ಜೈಲಲ್ಲೇ ಬಡಿದಾಡಿಕೊಂಡು ಸತ್ತ 63 ಖೈದಿಗಳು!

masthmagaa.com:

ದಕ್ಷಿಣ ಅಮೆರಿಕದ ಈಕ್ವೆಡಾರ್​​ನ ಜೈಲುಗಳಲ್ಲಿ ಗ್ಯಾಂಗ್​ವಾರ್ ನಡೆದಿದ್ದು ಅದರಲ್ಲಿ ಖೈದಿಗಳೇ ಹೊಡೆದಾಡಿಕೊಂಡು 63 ಜನ ಸಾವನ್ನಪ್ಪಿದ್ದಾರೆ. ಖೈದಿಗಳ ಗಲಾಟೆ ಹೇಗಿತ್ತು ಅಂದ್ರೆ ಭದ್ರತಾ ಸಿಬ್ಬಂದಿ ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸ ಪಟ್ಟಿದ್ದು, 800ಕ್ಕೂ ಹೆಚ್ಚು ಪೊಲೀಸರನ್ನು ಕರೆಸಿಕೊಳ್ಳಲಾಗಿತ್ತು. ಇವರಲ್ಲಿ ಕೆಲವರು ಜೈಲಿನಿಂದ ತಪ್ಪಿಸಿಕೊಳ್ಳುವ ಯತ್ನದಲ್ಲೂ ಸಾವನ್ನಪ್ಪಿದ್ದಾರೆ.

ಈಕ್ವೆಡಾರ್​ನ ಪಶ್ಚಿಮದಲ್ಲಿರೋ ಗ್ವಾಯಕ್ವಿಲ್​​ನಲ್ಲಿ 21 ಜನ ಸಾವನ್ನಪ್ಪಿದ್ರೆ, ದಕ್ಷಿಣದ ಕ್ವೆಂಕಾದಲ್ಲಿ 33, ಲಾಟಕುಂಗಾದಲ್ಲಿ 8 ಮಂದಿ ಖೈದಿಗಳು ಸಾವನ್ನಪ್ಪಿದ್ದಾರೆ. ದೇಶದ ಶೇ.70ರಷ್ಟು ಖೈದಿಗಳು ಈ ಜೈಲುಗಳಲ್ಲೇ ವಿವಿಧ ಅಪರಾಧಗಳಿಗಾಗಿ ಶಿಕ್ಷೆ ಅನುಭವಿಸುತ್ತಿದ್ದರು.

-masthmagaa.com

Contact Us for Advertisement

Leave a Reply