ಅತಿ ಹೆಚ್ಚು ವೀಕ್ಷಣೆ ಕಂಡ ಕನ್ನಡ ಸಿನಿಮಾ ಹಾಡುಗಳು!

masthmagaa.com:

ಮಳೆ ಬರ್ತಾ ಇದ್ದಾಗ ಟ್ರೇನ್‌ ಅಲ್ಲೊ, ಬಸ್‌ನಲ್ಲೋ ನಮ್ಮ ಫೆವರೇಟ್‌ ಸಾಂಗ್‌ ಕೇಳ್ತಾ ಹೋಗೊ ಮಜಾನೇ ಬೇರೆ ಅಲ್ವಾ, ನಮಗೆ ಬೇಜಾರ್‌ ಆದಾಗ ಪ್ಯಾಥೋ ಸಾಂಗ್ಸ್‌ ಕೇಳ್ತೀವಿ, ಪ್ಯಾಥೋ ಕೇಳ್ವಾಗ ಆ ಲಿರಿಕ್ಸ್‌ ಎಲ್ಲಾ ನಮ್ಮ ಲೈಫ್‌ ನೋಡ್ಕೊಂಡೆ ಬರೆದಿದಾರೇನೊ ಅಂತ ಅನ್ಸತ್ತೆ, ಇನ್ನು ಖುಷಿಲ್‌ ಇದ್ದಾಗ ನಮ್ಮ ಫೆವರೇಟ್‌ ಸಾಂಗ್‌ ಕೇಳ್ತೀವಿ. ಸಾಂಗ್‌ ಅನ್ನೋದು ನಮ್ಮ ಲೈಫ್‌ನ ಒಂದು ಭಾಗವಾಗಿ ಬಿಟ್ಟಿದೆ. ಎಷ್ಟೋ ಮೂವಿಗಳು ಹಿಟ್‌ ಆಗಿದ್ದೆ ಸಾಂಗ್‌ಗಳಿಂದ. ಅದರಲ್ಲೂ ಮೆಲೋಡಿ ಸಾಂಗ್ಸ್‌, ಪ್ಯಾಥೋ ಸಾಂಗ್ಸ್‌ಗಳನ್ನ ನಮ್ಮ ಭಾಷೆ ಅಂದ್ರೆ ಕನ್ನಡ ಭಾಷೆಲಿ ಕೇಳೋಕೆ ಮತ್ತೂ ಸಖತ್‌ ಆಗಿರತ್ತೆ. ಇವತ್ತಿನ ಈ ವರದಿಯಲ್ಲಿ ಹೆಚ್ಚು ವೀಕ್ಷಣೆ ಪಡೆದ ಕನ್ನಡದ 10 ಹಾಡುಗಳ ಬಗ್ಗೆ ತಿಳಿಸಿಕೊಡ್ತೀವಿ.

ಟಾಪ್‌ ಟೆನ್‌ ಅಲ್ಲಿ ಜಂಟಲ್‌ ಮ್ಯಾನ್‌ ಮೂವಿಯ ಸಾಂಗ್‌ ಇದೆ.
10.ಜಂಟಲ್‌ಮ್ಯಾನ್‌ ಮೂವಿಯ ಮರಳಿ ಮನಸಾಗಿದೆ : ಜಂಟಲ್‌ಮ್ಯಾನ್‌ ಚಿತ್ರದ ಈ ಹಾಡು 9 ಕೋಟಿ 40ಲಕ್ಷ ವ್ಯೂವ್ಸ್‌ ಪಡೆದುಕೊಂಡಿದೆ. ನಾಗಾರ್ಜುನ್‌ ಶರ್ಮಾ ಮತ್ತು ಕಿನ್ನಲ್‌ ರಾಜ್‌ ಅವರು ಇದಕ್ಕೆ ಲಿರಿಕ್ಸ್ ಬರೆದಿದ್ದಾರೆ, ಸಂಜಿತ್‌ ಹೆಗ್ಡೆ ಮತ್ತು ಸಿ.ಆರ್‌. ಬಾಬಿ(BOBBY) ಈ ಹಾಡನ್ನ ಹಾಡಿದ್ದಾರೆ. ಅಜನೀಶ್‌ ಲೋಕ್‌ನಾಥ್‌ ಅವರ ಸಂಗೀತದೊಂದಿಗೆ ಮೂಡಿಬಂದ ಈ ಹಾಡಿನಲ್ಲಿ ಡೈನಾಮಿಕ್‌ ಪ್ರಿನ್ಸ್‌ ಪ್ರಜ್ವಲ್‌ ದೇವರಾಜ್‌ ಮತ್ತು ನಿಶ್ವಿಕಾ ನಾಯ್ಡು ಹೀರೊ ಹೀರೊಯಿನ್‌ ಆಗಿ ಅಭಿನಯಿಸಿದ್ದಾರೆ.

9ನೇ ಸ್ಥಾನದಲ್ಲಿ
9.ಕಾಂತಾರ ಮೂವಿನ ಸಿಂಗಾರ ಸಿರಿಯೇ : 2022ರ ಬ್ಲಾಕ್‌ ಬಸ್ಟರ್‌ ಸಾಂಗ್‌ ಕಾಂತಾರ ಮೂವಿಯ ಸಿಂಗಾರ ಸಿರಿಯೇ ಹಾಡು 9 ಕೋಟಿ 88 ಲಕ್ಷ ವ್ಯೂವ್ಸ್‌ ಪಡೆದುಕೊಂಡಿದೆ. ಇನ್ನೇನೂ 10 ಕೋಟಿ ವ್ಯೂವ್ಸ್‌ಗಳನ್ನ ತಲುಪುವ ಹಂತದಲ್ಲಿದೆ. ಪ್ರಮೋದ್‌ ಮರವಂತೆ ಈ ಸಾಂಗ್‌ನ್ನ ಬರೆದಿದ್ದಾರೆ. ವಿಜಯ್‌ ಪ್ರಕಾಶ್‌, ಅನನ್ಯ ಭಟ್‌ ಈ ಹಾಡಿನ ಗಾಯಕರು. ಬಿ. ಅಜನೀಶ್‌ ಲೋಕ್‌ನಾಥ್‌ ಅವರ ಸಂಗೀತದಲ್ಲಿ ಮೂಡಿಬಂದ ಈ ಹಾಡಿಗೆ ರಿಷಬ್‌ ಶೆಟ್ಟಿ ಮತ್ತು ಸಪ್ತಮಿ ಗೌಡ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

8ನೇ ಸ್ಥಾನದಲ್ಲಿ
8.ಟಗರು ಮೂವಿಯ ಟಗರು ಬಂತು ಟಗರು : ಟಗರು ಮೂವಿಯ ಟಗರು ಬಂತು ಟಗರು ಸಾಂಗ್‌ 10 ಕೋಟಿ 75 ಲಕ್ಷ ವ್ಯೂವ್ಸ್‌ ಪಡೆದುಕೊಂಡಿದೆ. ಡಾ.ನಾಗೇಂದ್ರ ಪ್ರಸಾದ್‌ ಅವರ ಕೈಚಳಕದಲ್ಲಿ ಬರೆದ ಈ ಹಾಡಿಗೆ ಚರಣರಾಜ್‌ ಅವರ ಸಂಗೀತ ಇದೆ. ಇನ್ನೂತಮಿಳಿನ ಖ್ಯಾತ ಗಾಯಕ ಅಂತೋನಿ ದಾಸನ್‌ ಅವರು ಹಾಡಿದ ಈ ಹಾಡಿಗೆ ಶಿವಣ್ಣಭರ್ಜರಿ ಸ್ಟೆಪ್ಸ್‌ ಹಾಕಿದ್ದಾರೆ.

7ನೇ ಸ್ಥಾನದಲ್ಲಿ
7.ಅಯೋಗ್ಯ ಮೂವಿಯ ಏನಮ್ಮಿ ಏನಮ್ಮಿ : ಅಯೋಗ್ಯ ಮೂವಿಯ ಎನಮ್ಮಿ ಎನಮ್ಮಿ ಸಾಂಗ್‌ 10 ಕೋಟಿ 75 ಲಕ್ಷ ವ್ಯೂವ್ಸ್‌ ಪಡೆದುಕೊಂಡಿದೆ. ಇನ್ನು ಚೇತನ್‌ ಕುಮಾರ್‌ ಅವರು ಈ ಹಾಡಗೆ ಸಾಹಿತ್ಯ ಬರೆದಿದ್ದು, ಅರ್ಜುನ್‌ ಜನ್ಯಾ ಅವರ ಮ್ಯೂಸಿಕ್‌ ನಲ್ಲಿ ಈ ಹಾಡು ಮೂಡಿ ಬಂದಿದೆ. ವಿಜಯ್‌ ಪ್ರಾಕಾಶ್‌ ಮತ್ತು ಪಲಕ್‌ಮುಚ್ಚಲ್‌ ಅವರು ಹಾಡಿದ ಈ ಹಾಡಿನಲ್ಲಿ ನೀನಾಸಂ ಸತೀಶ್‌ ಮತ್ತು ರಚಿತಾ ರಾಮ್‌ ಮುಖ್ಯ ಪಾತ್ರದಲ್ಲಿ ಕಾಣಿಸಿದ್ದಾರೆ.

6ನೇ ಸ್ಥಾನದಲ್ಲಿ
6.ಕಿರಿಕ್‌ ಪಾರ್ಟಿಯ ಬೆಳಗೆದ್ದು ಯಾರ ಮುಖವ : ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ ಅಭಿನಯದ ಮತ್ತು ರಿಷಬ್‌ ಶೆಟ್ಟಿ ನಿರ್ದೇಶನದ ಕಿರಿಕ್‌ ಪಾರ್ಟಿಯ ಬೆಳಗೆದ್ದು ಯಾರ ಮುಖವ ನಾನು ನೋಡಿದೆ ಈ ಸಾಂಗ್‌ 11 ಕೋಟಿ 72 ಲಕ್ಷ ವ್ಯೂವ್ಸ್‌ ಪಡೆದುಕೊಂಡಿದೆ. ಇನ್ನೂ ಈ ಸಾಂಗ್‌ಗೆ ಧನಂಜಯ್‌ ರಂಜನ್‌ ಲಿರಿಕ್ಸ್‌ ಬರೆದಿದ್ದಾರೆ. ಬಿ. ಅಜನೀಶ್‌ ಲೋಕನಾಥ್‌ ಅವರ ಸಂಗೀತದಲ್ಲಿ ಮೂಡಿಬಂದ ಈ ಹಾಡನ್ನ ವಿಜಯ್‌ ಪ್ರಕಾಶ್‌ ಅವರು ಹಾಡಿದ್ದಾರೆ. ಇನ್ನು ಈ ಚಿತ್ರದಲ್ಲಿ ರಶ್ಮಿಕಾ ಮತ್ತು ಸಂಯುಕ್ತಾ ಹೆಗ್ದೆ ನಟಿಸಿದ್ದಾರೆ.

5ನೇ ಸ್ಥಾನದಲ್ಲಿ
5.ಅಂಜನಿಪುತ್ರ ಮೂವಿಯ ಚಂದ ಚಂದ : ಕರ್ನಾಟಕ ರತ್ನ ಡಾ. ಪುನೀತ್‌ ರಾಜ್‌ಕುಮಾರ್‌ ಅವರು ನಟಿಸಿದ ಅಂಜನಿಪುತ್ರ ಮೂವಿಯ ಚಂದ ಚಂದ ನನ್‌ ಹೆಂಡ್ತಿ ಸಾಂಗ್‌ 11 ಕೋಟಿ 78 ಲಕ್ಷ ವೀಕ್ಷಣೆಯನ್ನ ಪಡೆದುಕೊಂಡಿದೆ. ಪ್ರಮೋದ್‌ ಮರವಂತೆ ಅವರು ಈ ಹಾಡನ್ನ ಬರೆದರೆ ರವಿ ಬಸ್ರುರು ಮತ್ತು ಅನುರಾಧಾ ಭಟ್‌ ಈ ಸಾಂಗ್‌ನ ಸಿಂಗರ್ಸ್‌. ರವಿ ಬಸ್ರುರ್‌ ಅವರ ಸಂಗೀತದಲ್ಲಿ ಮೂಡಿಬಂದ ಈ ಹಾಡಿಗೆ ರಶ್ಮಿಕಾ ಮಂದಣ್ಣ ನಾಯಾಕಿ.

4ನೇ ಸ್ಥಾನದಲ್ಲಿ
4.ರಾಬರ್ಟ್‌ ಮೂವಿಯ ಕಣ್ಣು ಹೊಡಿಯಾಕ : ಚಾಲೆಂಜಿಂಗ್‌ ಸ್ಟಾರ್‌, ಅಭಿಮಾನಿಗಳ ದಾಸ, ಡಿ ಬಾಸ್‌ ನಟಿಸಿದ ರಾಬರ್ಟ್‌ ಮೂವಿಯ ಕಣ್ಣು ಹೊಡಿಯಾಕ ಸಾಂಗ್‌ 14 ಕೋಟಿ 87 ಲಕ್ಷ ವ್ಯೂವ್ಸ್‌ ಪಡೆದುಕೊಂಡಿದೆ. ಇನ್ನು ಈ ಸಾಂಗ್‌ನ್ನ ಯೋಗರಾಜ್‌ ಭಟ್‌ ಅವರು ಬರೆದರೆ, ಶ್ರೇಯಾ ಘೊಷಾಲ್‌ ಈ ಹಾಡಿಗೆ ದನಿಯಾಗಿದ್ದಾರೆ, ಅರ್ಜುನ್‌ ಜನ್ಯಾ ಅವರ ಮ್ಯೂಸಿಕ್‌ನೊಂದಿಗೆ ಮೂಡಿಬಂದ ಈ ಹಾಡಿನಲ್ಲಿ ಆಶಾ ಭಟ್‌ ಕೂಡ ನಟಿಸಿದ್ದಾರೆ.

3ನೇ ಸ್ಥಾನದಲ್ಲಿ
3. ರ‍್ಯಾಂಬೋ 2 ಮೂವಿಯ ಚುಟು ಚುಟು ಅಂತೈತಿ : ರ‍್ಯಾಂಬೋ 2 ಮೂವಿಯ ಚುಟು ಚುಟು ಅಂತೈತಿ ಸಾಂಗ್‌ 17 ಕೋಟಿ 34 ಲಕ್ಷ ವೀಕ್ಷಣೆ ಪಡೆದಿದೆ. ಶಿವು ಬೆರ್ಗಿ ಅವರು ಈ ಹಾಡನ್ನ ಬರೆದರೆ, ಅರ್ಜುನ್‌ ಜನ್ಯಾ ಅವರ ಮ್ಯೂಸಿಕ್‌ನಲ್ಲಿ ಈ ಹಾಡು ಮೂಡಿ ಬಂದಿದೆ. ರವೀಂದ್ರ ಸೊರಗಾವಿ ಮತ್ತು ಶಮಿತಾ ಮಲ್ನಾಡ್‌ ಹಾಡಿರುವ ಈ ಹಾಡಿನಲ್ಲಿ ಶರಣ್‌ ಮತ್ತು ಕನ್ನಡದ ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ್‌ ನಟಿಸಿದ್ದಾರೆ.

2ನೇ ಸ್ಥಾನದಲ್ಲಿ
2.ರಾಜ್‌ಕುಮಾರ ಮೂವಿಯ ಬೊಂಬೆ ಹೇಳುತೈತೆ : ಕರ್ನಾಟಕ ರತ್ನ, ಡಾ.ಪುನೀತ್‌ ರಾಜ್‌ಕುಮಾರ್‌ ಅಭಿನಯದ ರಾಜ್‌ಕುಮಾರ ಮೂವಿಯ ಬೊಂಬೆ ಹೇಳುತೈತೆ ಈ ಸಾಂಗ್‌ 19 ಕೋಟಿ 20 ಲಕ್ಷ ವೀಕ್ಷಣೆಯನ್ನ ಪಡೆದುಕೊಂಡಿದೆ. ಸಂತೋಷ್‌ ಆನಂದ್‌ರಾಮ್‌ ಅವರು ಬರೆದ ಈ ಹಾಡಿಗೆ ವಿ.ಹರಿಕೃಷ್ಣ ಅವರ ಮ್ಯೂಸಿಕ್‌ ಇದೆ. ವಿಜಯ್‌ ಪ್ರಕಾಶ್‌ ಅವರ ದನಿಯಲ್ಲಿ ಮೂಡಿಬಂದಿದೆ. ಇಷ್ಟೇ ಅಲ್ಲದೇ ರಾಜ್‌ಕುಮಾರ ಮೂವಿಯನ್ನ ನೋಡಿ ಇನ್‌ಸ್ಪೈರ್‌ ಆಗಿ 200ಕ್ಕೂ ಅಧಿಕ ಮಕ್ಕಳು ತಮ್ಮ ತಂದೆ-ತಾಯಿಯನ್ನ ವೃದ್ಧಾಶ್ರಮದಿಂದ ಮನೆಗೆ ಕರೆದುಕೊಂಡು ಹೋಗಿದಾರೆ ಅಂತ ವರದಿಯಾಗಿದೆ.

1ನೇ ಸ್ಥಾನದಲ್ಲಿ
1.ಪೊಗರು ಸಿನಿಮಾದ ಕರಾಬು : ಆಕ್ಷನ್‌ ಪ್ರಿನ್ಸ್‌ ಧೃವ ಸರ್ಜಾ ನಟಿಸಿದ ಪೊಗರು ಸಿನಿಮಾದ ಕರಾಬು ಸಾಂಗ್‌ 30 ಕೋಟಿ 52 ಲಕ್ಷ ವ್ಯೂವ್ಸ್‌ನ್ನ ಪಡೆದುಕೊಂಡಿದೆ. ಈ ಹಾಡಿಗೆ ಚಂದನ್‌ ಶೆಟ್ಟಿ ಅವರೇ ಲಿರಿಕ್ಸ್‌ ಬರೆದು, ಅವರೇ ಮ್ಯೂಸಿಕ್‌ ಮಾಡಿ, ಅವರೇ ಈ ಹಾಡನ್ನ ಹಾಡಿದ್ದಾರೆ. ಚಂದನ್‌ ಶೆಟ್ಟಿಯವರ ಕೈಚಳಕದಲ್ಲಿ ಮೂಡಿಬಂದ ಈ ಹಾಡಿಗೆ ಧೃವ ಸರ್ಜಾ ಕರಾಬಾಗಿ ಸ್ಟೆಪ್ಸ್‌ ಹಾಕಿದಾರೆ. ಸೋ ಕಾಲ್ಡ್‌ ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಅವರೂ ಕೂಡ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply