masthmagaa.com:

ಜಮ್ಮು-ಕಾಶ್ಮೀರದಲ್ಲಿ ಉಗ್ರರ ಉಪಟಳ ಮುಂದುವರದಿದೆ. ಇಂದು ಬೆಳಗ್ಗೆ ಬುದ್ಗಾಮ್​ ಜಿಲ್ಲೆಯ ಚಡೂರಾ ಎಂಬಲ್ಲಿ ಸಿಆರ್​ಪಿಎಫ್​ ಪಡೆಗಳ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಓರ್ವ ಯೋಧ ಹುತಾತ್ಮರಾಗಿದ್ದಾರೆ.

ಬೈಕ್​ನಲ್ಲಿ ಬಂದಿದ್ದ ಉಗ್ರರು ಗುಂಡಿನ ದಾಳಿ ನಡೆಸಿ ಒಂದು AK ರೈಫಲ್​ ಅನ್ನು ಕಸಿದು ಪರಾರಿಯಾಗಿದ್ದಾರೆ ಅಂತ ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ತಿಳಿಸಿದೆ. ಸದ್ಯ ಚಡೂರಾ ಪ್ರದೇಶವನ್ನು ಸುತ್ತುವರಿದಿರುವ  ಭದ್ರತಾಪಡೆಗಳು ಉಗ್ರರ ಹೆಡೆಮುರಿಕಟ್ಟಲು ಕಾರ್ಯಾಚರಣೆ ನಡೆಸುತ್ತಿವೆ.

ಮತ್ತೊಂದುಕಡೆ ಪುಲ್ವಾಮಾ ಜಿಲ್ಲೆಯ ಮಚ್ಚಿಹೋಮ್​ ಎಂಬಲ್ಲಿ ನಡೆದ ಎನ್​ಕೌಂಟರ್​ನಲ್ಲಿ ಓರ್ವ ಉಗ್ರನನ್ನು ಭದ್ರತಾಪಡೆಗಳು ಹೊಡೆದುರುಳಿಸಿದೆ.

-masthmagaa.com

Contact Us for Advertisement

Leave a Reply