ದುರ್ಗಾ ಮೂರ್ತಿ ಬಿಡಲು ಹೋಗಿ ಹೆಣವಾದ ಯುವಕ

ಮಧ್ಯಪ್ರದೇಶದ ಮಂದಸೋರ್ ಜಿಲ್ಲೆಯ ಶ್ಯಾಮ್‍ಗಡದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ದುರ್ಗಾ ಪ್ರತಿಮೆ ವಿಸರ್ಜನೆ ವೇಳೆ ಯುವಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಉತ್ತರ ಪ್ರದೇಶ ಮೂಲದ ಈ ಯುವಕ ಶ್ಯಾಮಗಡದಲ್ಲಿ ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದ. ದುರ್ಗಾ ಮೂರ್ತಿ ವಿಸರ್ಜನೆ ವೇಳೆ ಈತ ನೀರಿನಾಳಕ್ಕೆ ಇಳಿದಿದ್ದ ಈತ, ಇದ್ದಕ್ಕಿದ್ದಂತೆ ಮುಳುಗಲು ಆರಂಭಿಸಿದ. ಆದ್ರೆ ಅಕ್ಕಪಕ್ಕದಲ್ಲಿ ಇದ್ದವರಿಗೂ ಈತ ಮುಳುಗುತ್ತಿದ್ದಾನೆ ಅನ್ನೋದು ಗೊತ್ತಾಗಲೇ ಇಲ್ಲ. ಈ ವೇಳೆ ಯುವಕ ಕೈ ಬಡಿಯಲಾರಂಭಿಸಿದ್ರೂ ಕೂಡ ಸುತ್ತಲೂ ಇದ್ದ ಯುವಕರಿಗೆ ಏನಾಗ್ತಿದೆ ಅಂತಲೇ ಗೊತ್ತಾಗಲಿಲ್ಲ. ನಂತರ ಸ್ವಲ್ಪ ಹೊತ್ತಲ್ಲೇ ಆತ ಫುಲ್ ಮುಳುಗಿ ಹೋಗಿದ್ದಾನೆ. ನಂತರ ಆತನ ಮೃತದೇಹವನ್ನು ಹೊರತೆಗೆಯಲಾಯ್ತು. ಆದ್ರೆ ಮೇಲಿದ್ದ ಕೆಲವರು ಈ ಘಟನೆಯ ವಿಡಿಯೋ ಮಾಡಿದ್ದಾರೆ. ಆದ್ರೆ ಯುವಕನ ರಕ್ಷಣೆಗೆ ಮುಂದಾಗಲಿಲ್ಲ. ಮೃತನನ್ನು 30 ವರ್ಷದ ಅಮಿತ್ ಲೋದಿ ಎಂದು ಗುರುತಿಸಲಾಗಿದೆ.

Contact Us for Advertisement

Leave a Reply