masthmagaa.com:

ಐಪಿಎಲ್​ನಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದ್ರಾಬಾದ್ ವಿರುದ್ಧ ಚೆನ್ನೈ ಸೂಪರ್​ ಕಿಂಗ್ಸ್​ 20 ರನ್​​ಗಳ ಗೆಲುವು ಸಾಧಿಸಿದೆ. ಸೋಲಿನ ಮೇಲೆ ಸೋಲು ಕಾಣುತ್ತಿದ್ದ ಧೋನಿ ತಂಡ ಕೊನೆಗೂ ಗೆಲುವಿನ ನಗೆ ಬೀರಿದೆ. ಇದರ ನಡುವೆ ಹಿಸ್ಟರಿ ರಿಪೀಟ್ ಆಗುವ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. 2010ರಲ್ಲಿ ಮೊದಲ 7 ಪಂದ್ಯಗಳಲ್ಲಿ ಕೇವಲ ಎರಡಲ್ಲಿ ಗೆದ್ದು, ನಂತರದ 7 ಪಂದ್ಯಗಳಲ್ಲಿ 5 ಗೆದ್ದಿದ್ದ ಚೆನ್ನೈ ತಂಡ ಚಾಂಪಿಯನ್ ಆಗಿತ್ತು. ಈ ಬಾರಿಯೂ ಮೊದಲ 7 ಪಂದ್ಯಗಳಲ್ಲಿ 2 ಗೆದ್ದಿದ್ದ ಚೆನ್ನೈ 8ನೇ ಪಂದ್ಯವಾದ ನಿನ್ನೆ ಗೆಲುವು ಸಾಧಿಸಿದೆ. ಹೀಗಾಗಿ 2010ರಂತೆಯೇ ಹಿಸ್ಟರಿ ರಿಪೀಟ್ ಆಗುತ್ತಾ ಅಂತ ಚರ್ಚೆ ನಡೆಯುತ್ತಿದೆ. ಆದ್ರೆ ಅದು ಅಷ್ಟು ಸುಲಭವಿಲ್ಲ.

ಇನ್ನು ನಿನ್ನೆಯ ಪಂದ್ಯದಲ್ಲಿ ಮತ್ತೊಂದು ಘಟನೆ ನಡೆದಿದೆ. ಶಾರ್ದೂಲ್ ಠಾಕೂರ್ ಬೌಲಿಂಗ್ ವೇಳೆ ಆಫ್​ಸೈಡ್​​ನ ಹೊರಗೆ ಹೋದ ಚೆಂಡನ್ನು ವೈಡ್ ಅಂತ ತೀರ್ಪು ನೀಡಲು ಅಂಪೈರ್ ಮುಂದಾದ್ರು. ಇದಕ್ಕೆ ಕೀಪಿಂಗ್ ಮಾಡ್ತಿದ್ದ ಧೋನಿ ಮತ್ತು ಬೌಲರ್ ಶಾರ್ದೂಲ್ ಠಾಕೂರ್ ವಿರೋಧ ವ್ಯಕ್ತಪಡಿಸಿದ್ರು. ಆಗ ವೈಡ್​ ಕೊಡ್ಬೇಕು ಎರಡೂ ಕೈಗಳನ್ನ ಎತ್ತಿದ್ದ ಅಂಪೈರ್ ತಮ್ಮ ಕೈಗಳನ್ನ ನಿಧಾನಕ್ಕೆ ಕೆಳಗಿಳಿಸಿದರು. ಅಂದ್ರೆ ಗುಡ್ ಬಾಲ್ ಅಂತ ತೀರ್ಪು ನೀಡಿದ್ರು. ಇದಕ್ಕೆ ಪೆವಿಲಿಯನ್​ನಲ್ಲಿ ಕೂತಿದ್ದ ಹೈದ್ರಾಬಾದ್​ ತಂಡದ ನಾಯಕ ಡೇವಿಡ್ ವಾರ್ನರ್ ಬೇಸರ ವ್ಯಕ್ತಪಡಿಸಿದ್ರು. ಕೂಲ್ ಕ್ಯಾಪ್ಟನ್​ ಧೋನಿಯ ಈ ನಡೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಅಂಪೈರ್ ಮೇಲೆ ಧೋನಿ ಹೀಗೆ ಒತ್ತಡ ಹೇರಬಾರದಿತ್ತು. ಅಂಪೈರ್ ಕೂಡ ಯಾವುದೇ ಒತ್ತಡಕ್ಕೆ ಮಣಿಯಬಾರದಿತ್ತು ಅಂತ ಕ್ರಿಕೆಟ್​ ವಿಶ್ಲೇಷಕರು ಹೇಳುತ್ತಿದ್ದಾರೆ.

-masthmagaa.com

Contact Us for Advertisement

Leave a Reply