ಕೆಲಸದ ಜಾಗಕ್ಕೆ ಮಕ್ಕಳನ್ನು ಕರ್ಕೊಂಡ್ ಹೋದ್ರೆ ಹಿಂಗಾಗುತ್ತೆ..!

ಕೆಲಸ ಮಾಡೋ ಜಾಗಕ್ಕೆ ಮಕ್ಕಳನ್ನು ಕರ್ಕೊಂಡ್ ಹೋಗಬಾರದು ಅಂತಾರೆ. ಆ ಮಾತು ಈ ಘಟನೆಗೆ ಸರಿಯಾಗಿ ಸೂಟ್ ಆಗುತ್ತೆ. ಆಂಗ್ಲ ಭಾಷೆಯ ನ್ಯೂಸ್ ಚಾನಲ್ ಒಂದರಲ್ಲಿ ನಿರೂಪಕಿ ಕರ್ಟನಿ ಕ್ಯುಬೆ ಎಂಬುವವರು ನಿರೂಪಣೆ ಮಾಡುತ್ತಿದ್ದರು. ಉತ್ತರ ಸಿರಿಯಾದಲ್ಲಿ ತುರ್ಕಿಷ್ ಏರ್ ಸ್ಟ್ರೈಕ್ ಬಗ್ಗೆ ಚರ್ಚೆ ಮಾಡುತ್ತಿದ್ದ ವೇಳೆ ಅಲ್ಲಿಗೆ ಬಂದ ಆಕೆಯ 4 ವರ್ಷದ ಪುತ್ರ ರ್ಯಾನ್, ಆಕೆಯ ಗಮನ ಸೆಳೆದಿದ್ದಾನೆ. ಈ ವೇಳೆ ಎಕ್ಸ್ ಕ್ಯೂಸ್‍ಮಿ ನನ್ನ ಮಗು ಎಂದು ನೇರ ಪ್ರಸಾರದಲ್ಲೇ ಹೇಳುವ ನಿರೂಪಕಿ ಮಗುವನ್ನು ಎತ್ತಿಕೊಂಡಿದ್ದಾಳೆ. ಈ ವಿಡಿಯೋವನ್ನು ಖಾಸಗಿ ವಾಹಿನಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದೆ.

Contact Us for Advertisement

Leave a Reply