ಅಟಾರ್ನಿ ಜನರಲ್‌ ಹುದ್ದೆಯನ್ನ ತಿರಸ್ಕರಿಸಿದ ಹಿರಿಯ ವಕೀಲ ಮುಕುಲ್‌ ರೋಹಟಗಿ!

masthmagaa.com:

ಭಾರತದ ಮುಂದಿನ ಅಟಾರ್ನಿ ಜನರಲ್‌ ಹುದ್ದೆಗೆ ಹಿರಿಯ ವಕೀಲ ಮುಕುಲ್‌ ರೋಹಟಗಿ ಅವ್ರನ್ನ ಸರ್ಕಾರ ಸೂಚಿಸಿತ್ತು. ಆದ್ರೆ ಇದೀಗ ಹುದ್ದೆಯ ಪ್ರಸ್ತಾಪವನ್ನ ರೋಹಟಗಿ ತಿರಸ್ಕರಿಸಿದ್ದಾರೆ. ತಮ್ಮ ನಿರ್ಧಾರದ ಹಿಂದೆ ಯಾವುದೇ ನಿರ್ದಿಷ್ಟ ಕಾರಣವಿಲ್ಲ ಅಂತ ಹೇಳಿದ್ದಾರೆ. ಅಂದ್ಹಾಗೆ ಈಗಾಗಲೇ ಈ ಹಿಂದೆ ಜೂನ್‌ 2014ರಿಂದ ಜೂನ್‌ 2017ರವರೆಗೆ ಅಟಾರ್ನಿ ಜನರಲ್‌ ಆಗಿ ರೋಹಟಗಿ ಸೇವೆ ಸಲ್ಲಿಸಿದ್ದಾರೆ. ಇವರ ನಂತರ ಜುಲೈ 2017ರಲ್ಲಿ ಕೆಕೆ ವೇಣುಗೋಪಾಲ್‌ ಅವ್ರನ್ನ ನೇಮಿಸಲಾಗಿತ್ತು. 91 ವರ್ಷದ ವೇಣುಗೋಪಾಲ್‌ ಅವ್ರ ಅಧಿಕಾರವಧಿ ಇದೇ ಸೆಪ್ಟಂಬರ್‌ 30ಕ್ಕೆ ಕೊನೆಗೊಳ್ಳಲಿದೆ. ಹೀಗಾಗಿ ವೇಣುಗೋಪಾಲ್ ಬದಲಿಗೆ ರೋಹಟಗಿ ಅವರಿಗೆ ಅಟಾರ್ನಿ ಜನರಲ್ ಹುದ್ದೆಯನ್ನ ನೀಡಲಾಗಿತ್ತು. ಆದರೆ ಈ ಪ್ರಸ್ತಾಪವನ್ನ ರೋಹಟಗಿ ನಿರಾಕರಿಸಿದ್ದಾರೆ.

-masthmagaa.com

Contact Us for Advertisement

Leave a Reply