ಜೈಲಿನಲ್ಲಿದ್ದುಕೊಂಡು ವಿಚ್ಛೇದನ ಪಡೆದ ಇಂದ್ರಾಣಿ ಮುಖರ್ಜಿ..!

ಶೀನಾ ಬೋರಾ ಹತ್ಯೆ ಕೇಸಲ್ಲಿ ಜೈಲಲ್ಲಿರುವ ಇಂದ್ರಾಣಿ ಮುಖರ್ಜಿ ಮತ್ತು ಪೀಠರ್ ಮುಖರ್ಜಿ ಪರಸ್ಪರ ತಲಾಕ್ ಪಡೆದಿದ್ದಾರೆ. ಗುರುವಾಗ ಅಂದ್ರೆ ನಿನ್ನೆ ಮುಂಬೈನ ಫ್ಯಾಮಿಲಿ ಕೋರ್ಟ್ ತಲಾಕ್‍ಗೆ ಅನುಮತಿ ಕೂಡ ನೀಡಿದೆ. 2017ರಲ್ಲೇ ಇಂದ್ರಾಣಿ ಮತ್ತು ಪೀಠರ್ ಮುಖರ್ಜಿ ವಿಚ್ಛೇದನ ಪಡೆದುಕೊಳ್ಳಲು ನಿರ್ಧರಿಸಿದ್ದರು. ನಂತರ ಇಂದ್ರಾಣಿಯವರೇ ಪೀಠರ್ ಮುಖರ್ಜಿಗೆ ಡಿವೋರ್ಸ್ ನೋಟಿಸ್ ಕಳುಹಿಸಿದ್ದರು. ಅದರಂತೆ 2018ರಲ್ಲಿ ಇಬ್ಬರು ಕೋರ್ಟ್ ಮುಂದೆ ವಿಚ್ಛೇದನಕ್ಕೆ ಒಪ್ಪಿಕೊಂಡಿದ್ದರು. ಅದರಂತೆ ಈಗ ವಿಚ್ಛೇದನಕ್ಕೆ ಮುಂಬೈನ ಕೌಟುಂಬಿಕ ನ್ಯಾಯಾಲಯ ಗ್ರೀನ್ ಸಿಗ್ನಲ್ ನೀಡಿದೆ.

ಶೀನಾ ಬೋರಾ ಅಂದ್ರೆ ಮಗಳ ಹತ್ಯೆ ಕೇಸಲ್ಲಿ ಇಂದ್ರಾಣಿ ಮತ್ತು ಆಕೆಯ ಪತಿ ಪೀಠರ್ 2015ರಿಂದ ಜೈಲಿನಲ್ಲಿದ್ದಾರೆ.

Contact Us for Advertisement

Leave a Reply