ಎಂಬಿಎ ಓದಿದ್ರೂ ರಸ್ತೆ ಬದಿ ತಿಂಡಿ ಮಾರ್ತಾರೆ..! ಯಾಕೆ ಗೊತ್ತಾ..?

ಈಗೇನಿದ್ರೂ ನಾವಾಯ್ತು, ನಮ್ಮ ಕುಟುಂಬವಾಯ್ತು ಅನ್ನೋರೇ ಹೆಚ್ಚು.. ಆದ್ರೆ ಇಲ್ಲೊಂದು ಎಂಬಿಎ ಪಡೆದಿರುವ ದಂಪತಿ ತಮ್ಮ ಮನೆಯಲ್ಲಿ ಕೆಲಸ ಮಾಡುವ ಮಹಿಳೆಗೆ ಸಹಾಯ ಮಾಡಲು ಬೀದಿ ಬದಿಯಲ್ಲಿ ತಿಂಡಿ ಮಾರುತ್ತಿದ್ದಾರೆ. ಹೌದು, ಮುಂಬೈನ ಕಂಡೀವಲಿಯಲ್ಲಿ ಅಶ್ವಿನಿ ಶೆಣೈ ಶಾ ಮತ್ತವರ ಪತಿ ಬೀದಿ ಬಂದಿಯಲ್ಲಿ ತಿಂಡಿ ಅಂಗಡಿ ಇಡ್ತಾರೆ. ಎಂಬಿಎ ಪದವೀಧರರಾಗಿರುವ ಬೆಳಗ್ಗೆ 4 ಗಂಟೆಯಿಂದ 10 ಗಂಟೆವರೆಗೆ ಸಣ್ಣ ಅಂಗಡಿ ಇಟ್ಟು, ತಿಂಡಿ ಮಾರಾಟ ಮಾಡುತ್ತಾರೆ. ನಂತರ ಇಬ್ಬರೂ ತಮ್ಮ ತಮ್ಮ ಕೆಲಸಗಳಿಗೆ ಹೋಗ್ತಾರೆ. ಹಾಗಂತ ಇವರು ದುಡ್ಡು ಮಾಡೋಕೆ ಮಾಡ್ತಿಲ್ಲ. ತಮ್ಮ ಮನೆಯಲ್ಲಿ ಅಡುಗೆ ಕೆಲಸಕ್ಕೆ ಬರುವ ಮಹಿಳೆಯ ತಂದೆಗೆ ಪ್ಯಾರಾಲಿಸಿಸ್ ಆಗಿದೆ. ಹೀಗಾಗಿ ಆಕೆಗೆ ಸಹಾಯ ಮಾಡಲು ಈ ರೀತಿ ಒದ್ದಾಡುತ್ತಿದ್ದಾರೆ. ಈ ಬಗ್ಗೆ ದೀಪಾಲಿ ಭಟ್ ಎಂಬುವವರು ಫೇಸ್‍ಬುಕ್‍ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್‍ನ್ನು 12 ಸಾವಿರ ಜನ ಲೈಕ್ ಮಾಡಿದ್ದು, ನೂರಾರು ಮಂದಿ ಕಮೆಂಟ್ ಮಾಡಿದ್ದಾರೆ.

 

Contact Us for Advertisement

Leave a Reply