ರೈಲಿನಲ್ಲಿ ಬೆಂಕಿ..ಆಮೇಲೆ ಏನಾಯ್ತು ಗೊತ್ತಾ..?

ಮುಂಬೈನ ವಾಶೀ ರೈಲ್ವೆ ನಿಲ್ದಾಣದಲ್ಲಿ ಪನ್ವೇಲಿ ಕಡೆಗೆ ಹೊರಟಿದ್ದ ರೈಲಿಗೆ ಬೆಂಕಿ ತಗುಲಿದೆ. ರೈಲಿನ ಪೆಂಟೋಗ್ರಫ್‍ನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ತಕ್ಷಣವೇ ರೈಲು ಖಾಲಿ ಮಾಡಿ, ಪ್ರಯಾಣಿಕರನ್ನು ಹೊರಗೆ ಕಳುಹಿಸಲಾಯ್ತು. ನಂತರ ಇಡೀ ವಾಶಿ ರೈಲ್ವೆ ನಿಲ್ದಾಣವನ್ನು ಖಾಲಿ ಮಾಡಲಾಗಿದೆ. ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಯಾವುದೇ ಅನಾಹುತ ಸಂಭವಿಸುವ ಮುನ್ನವೇ ಬೆಂಕಿ ನಂದಿಸಲು ಸಾಧ್ಯವಾಯ್ತು. ಆದ್ರೆ ರೈಲು ಸಂಚಾರದಲ್ಲಿ ವಿಳಂಬವಾಗಿದೆ.

ಟೆಂಪೋಗ್ರಫ್ ಮೇಲೆ ಯಾರೋ ದುಷ್ಕರ್ಮಿಗಳು ಬ್ಯಾಗ್ ಎಸೆದ ಪರಿಣಾಮ ಈ ಘಟನೆ ಸಂಭವಿಸಿದೆ. ಇದರಿಂದ ಶಾರ್ಟ್ ಸಕ್ರ್ಯೂಟ್ ಉಂಟಾಗಿ, ಅವಘಡ ಸಂಭವಿಸಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಬ್ಯಾಗ್ ಎಸೆದ ದುಷ್ಕರ್ಮಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

Contact Us for Advertisement

Leave a Reply