ಸಿದ್ದು ವಿರುದ್ಧ ಸಿಡಿದ ಮುನಿಯಪ್ಪಗೆ ಸಂಕಷ್ಟ..!

ಸಿದ್ದರಾಮಯ್ಯ ವಿರುದ್ಧ ಸಿಡಿದಿದ್ದ ಹಿರಿಯ ಕಾಂಗ್ರೆಸ್ ನಾಯಕ ಕೆ.ಹೆಚ್.ಮುನಿಯಪ್ಪಗೆ ಸಂಕಷ್ಟ ಎದುರಾಗಿದೆ. ಕೋಲಾರದಲ್ಲಿ ಪಕ್ಷ ವಿರೋಧ ಕೆಲಸ ಹುಟ್ಟುಹಾಕಿದ್ದೇ ಕೆ.ಹೆಚ್.ಮುನಿಯಪ್ಪ ಅಂತ ಕೆಪಿಸಿಸಿ ಸತ್ಯಶೋಧನಾ ಸಮಿತಿಗೆ ದೂರು ನೀಡಲಾಗಿದೆ. ಕೋಲಾರ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಯುಂ ಈ ದೂರು ನೀಡಿದ್ದಾರೆ. ಕೋಲಾರದಲ್ಲಿ ಕಾಂಗ್ರೆಸ್ ವಿರೋಧಿ ಚಟುವಟಿಕೆ ಶುರುವಾಗಿದ್ದೇ ಮಾಜಿ ಸಂಸದ ಮುನಿಯಪ್ಪರಿಂದ, ಕೋಲಾರದಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲ್ಲಲು ಮುನಿಯಪ್ಪ ಅವರೇ ಕಾರಣ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸಿದ್ದರಾಮಯ್ಯ ವಿರುದ್ಧ ಹಿರಿಯ ಕಾಂಗ್ರೆಸ್ಸಿಗರು ಸಿಡಿದಿರುವ ಹೊತ್ತಲ್ಲೇ ಈ ದೂರು ಮುನಿಯಪ್ಪರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

Contact Us for Advertisement

Leave a Reply