ಅತಿಹೆಚ್ಚು ಕಾಂಡೋಮ್‌ ಬಳಸೋರು ಮುಸ್ಲಿಮರು: ಓವೈಸಿ

masthmagaa.com:

ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಇತ್ತೀಚಿಗೆತಾನೇ ಜನಸಂಖ್ಯಾ ನಿಯಂತ್ರಣದ ಬಗ್ಗೆ ಮಾತನಾಡಿದ್ರು. ಎಲ್ಲರಿಗೂ ಒಂದೇ ಕಾನೂನು ಬರಬೇಕು, ಜನಸಂಖ್ಯಾ ನೀತಿಯಲ್ಲಿ ಧರ್ಮಾಧಾರಿತ ಅಸಮತೋಲನ ಇದೆ ಅಂತ ಹೇಳಿದ್ರು. ಇದರ ವಿರುದ್ದ ಒಂದೇ ಸಮಾನಾಗಿ ವಾಗ್ದಾಳಿ ಮಾಡ್ತಿರೋ ಸಂಸದ ಅಸಾದುದ್ದೀನ್‌ ಓವೈಸಿ ಮತ್ತೊಂದು ಇಂಟರಸ್ಟಿಂಗ್ ಹೇಳಿಕೆ ನೀಡಿದ್ದಾರೆ. ದೇಶದಲ್ಲಿ ಮುಸ್ಲಿಂರ ಸಂಖ್ಯೆ ಹೆಚ್ಚುತ್ತಿಲ್ಲ. ಅತಿಹೆಚ್ಚು ನಿರೋಧಗಳನ್ನ ಬಳಸುವುದು ಮುಸ್ಲಿಮರು ಅಂತ ತಿರುಗೇಟು ಕೊಟ್ಟಿದ್ದಾರೆ. ಹೈದ್ರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವನ್ನ ಉದ್ದೇಶಿಸಿ ಮಾತನಾಡಿದ ಓವೈಸಿ ಮುಸ್ಲಿಮರ ಜನಸಂಖ್ಯೆ ಹೆಚ್ಚುತ್ತಿಲ್ಲ. ಈ ವಿಚಾರವಾಗಿ ಆತಂಕ ಬೇಡ. ಮುಸ್ಲಿಮರ ಸಂಖ್ಯೆ ಇಳಿಮುಖವಾಗ್ತಿದೆ. ಮುಸ್ಲಿಮರು ಅತಿಹೆಚ್ಚಾಗಿ ಕಾಂಡೋಮ್‌ ಬಳಸ್ತಿರೋದ್ರಿಂದ ಎರಡು ಮಕ್ಕಳ ನಡುವಿನ ಅಂತರ ಕೂಡ ಹೆಚ್ಚುತ್ತಿದೆ. ದೇಶದಲ್ಲಿ ಅತಿಹೆಚ್ಚು ಕಾಂಡೋಮ್‌ ಬಳಸ್ತಿರೋದು ಯಾರು? ಅದು ನಾವೇ. ಈ ಬಗ್ಗೆ ಮೋಹನ್‌ ಭಾಗವತ್‌ ಮಾತೇ ಆಡೋದಿಲ್ಲ ಅಂತ ಹೇಳಿದ್ದಾರೆ. ಇನ್ನು ಈ ಹೇಳಿಕೆ ಸಂಬಂಧಪಟ್ಟಂತೆ ಬಿಜೆಪಿ ಕೂಡ ಪ್ರತಿಕ್ರಿಯಿಸಿದೆ. ಓವೈಸಿ bayan purush ಅಥವಾ ಹೇಳಿಕೆ ಪುರುಷ ಅಂತ ಕಾಲೆಳಿದಿದೆ.

-masthmagaa.com

Contact Us for Advertisement

Leave a Reply