ಅಪ್ಪು ಸಿನಿಮಾ ನೋಡಿ IAS ಪಾಸ್‌ ಮಾಡಿದ ಮೈಸೂರು ಹುಡುಗ!

masthmagaa.com:

ಸ್ನೇಹಿತರೇ, ಸಿನಿಮಾ ಅಂದ ತಕ್ಷಣ ಕೇವಲ ಎಂಟರ್ಟೈನ್ ಮೆಂಟ್ ಅಷ್ಟೇ ಅಂತ ನಾವು ಭಾವಿಸ್ತೀವಿ. ಆದ್ರೆ ಅದನ್ನು ಹೊರತುಪಡಿಸಿ ನಮ್ಮನ್ನ ಯಾವುದಾದರೂ ಒಂದು ರೀತಿಯಲ್ಲಿ inspire ಮಾಡಬಹುದಾದಂತಹ ಎಷ್ಟೋ ಸಿನಿಮಾಗಳು ನಮ್ಮ ಕನ್ನಡ ಚಿತ್ರರಂಗದಲ್ಲಿ ಬಂದಿವೆ, ಬರ್ತಾನೂ ಇರುತ್ತವೆ.
80, 90 ರ ದಶಕದಲ್ಲಿ ಅಣ್ಣಾವ್ರು ಅಭಿನಯಿಸಿದ್ದ ಚಿತ್ರಗಳೆಲ್ಲವೂ ಸ್ಫೂರ್ತಿಯ ಚಿಲುಮೆಯೇ ಆಗಿದ್ದವು. Inspirational ಸಿನಿಮಾಗಳಿಗೆ care of address ಅಣ್ಣಾವ್ರು ಆಗಿದ್ದರು. ಅಣ್ಣಾವ್ರ ಬಹುತೇಕ ಸಿನಿಮಾಗಳು ಒಬ್ಬ ideal ಪರ್ಸನ್ ಹೇಗಿರಬೇಕು, ಆತನ ನಡೆ ನುಡಿ ಹೇಗಿರಬೇಕು, ಗುರು ಹಿರಿಯರಿಗೆ ಯಾವ ರೀತಿ ಗೌರವ ಕೊಡಬೇಕು, ಹೆಣ್ಣುಮಕ್ಕಳ ಹತ್ತಿರ ಹೇಗೆ ನಡ್ಕೋಬೇಕು ಅನ್ನೋದನ್ನ ಸಾರಿ ಸಾರಿ ಹೇಳುತ್ತಿದ್ದವು. ವಿಚಾರದ ಜೊತೆಗೆ ವ್ಯಕ್ತಿತ್ವ ವಿಕಸನದ visual document ರೀತಿ ಅಣ್ಣಾವ್ರ ಎಷ್ಟೋ ಸಿನಿಮಾಗಳು ಜನಮನವನ್ನು ಸೆಳೆಯುತ್ತಿದ್ದವು ಅನ್ನೋದರಲ್ಲಿ ಅನುಮಾನವೇ ಇಲ್ಲ. Dr. ರಾಜ್ ಕುಮಾರ್ ಅವರ ಬಂಗಾರದ ಮನುಷ್ಯ ಸಿನಿಮಾ ಬಿಡುಗಡೆ ಆದಾಗ ಕೆಲಸಕ್ಕಾಗಿ ಹಳ್ಳಿ ಬಿಟ್ಟು ಸಿಟಿ ಸೇರಿದ್ದ ಲಕ್ಷಾಂತರ ಜನ ಪುನಃ ಹಳ್ಳಿಗಳಿಗೆ ಮುಖ ಮಾಡಿ ವ್ಯವಸಾಯ ಮಾಡೋದಕ್ಕೆ ಶುರು ಮಾಡಿದ್ರು ಅಂದ್ರೆ ಒಂದು ಸಿನಿಮಾದ ಶಕ್ತಿ ಎಂಥದ್ದು ಅಂತ ನೀವೇ ಯೋಚನೆ ಮಾಡಿ.

ಸೋ, ಹೀಗೆ ಏಷ್ಟೋ ಸಿನಿಮಾಗಳು ನಮ್ಮನ್ನ ಒಂದಲ್ಲ ಒಂದು ರೀತಿಯಲ್ಲಿ inspire ಮಾಡಿರುತ್ವೆ, ನಮ್ಮ ಯೋಚನಾ ಕ್ರಮವನ್ನು ಬದಲಾಯಿಸಿರುತ್ವೆ, ಜೀವನದಲ್ಲಿ ಏನಾದ್ರೂ ಸಾಧಿಸಲೇಬೇಕು ಎಂಬ ಛಲ ಮತ್ತು ಹಠವನ್ನ ಹುಟ್ಟುಹಾಕಿರುತ್ವೆ. ಈ ಸಾಲಿಗೆ ಅಪ್ಪು ಅಭಿನಯದ ಪೃಥ್ವಿ ಸಿನಿಮಾ ಕೂಡ ಸೇರತ್ತೆ.

2010 ರಲ್ಲಿ ಬಿಡುಗಡೆಯಾದ ಪೃಥ್ವಿ ಸಿನಿಮಾದಲ್ಲಿ ಅಪ್ಪು IAS ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರು. ಬಳ್ಳಾರಿ ಡಿಸಿ ಯಾಗಿ ಖಡಕ್ ಅಭಿನಯ ನೀಡಿದ್ದ ಅಪ್ಪು ಅವರ ಹಿಂದಿನ ಎಲ್ಲ ಸಿನಿಮಾಗಳಿಗಿಂತ ಈ ಸಿನಿಮಾದ ಟ್ರೀಟ್ಮೆಂಟ್ ವಿಭಿನ್ನವಾಗಿತ್ತು. ಕಮರ್ಶಿಯಲ್ ಹೀರೋ ಆಗಿ ಅಲ್ಲಿ ತನಕ ಗುರುತಿಸಿಕೊಂಡಿದ್ದ ಅಪ್ಪು ಅವರ ತುಂಬಾನೇ ನೈಜತೆಗೆ ಹತ್ತಿರವಾಗಿದ್ದ ಕಂಟೆಂಟ್ ಬೇಸ್ಡ್ ಚಿತ್ರ ಇದಾಗಿತ್ತು. ಯಾವ ಸಮಯದಲ್ಲಿ ಬಳ್ಳಾರಿಯಲ್ಲಿ ಗಣಿ ಧಣಿಗಳ ಆರ್ಭಟ ಜೋರಾಗಿತ್ತೋ ಅದೇ ಸಮಯದಲ್ಲಿ ಅದೇ ಕಥಾವಸ್ತುವನ್ನು ಇಟ್ಟುಕೊಂಡು ಗಣಿಧಣಿಗಳಿಗೆ ಒಬ್ಬ DC ಬುದ್ಧಿ ಕಲಿಸುವ ಡೇರಿಂಗ್ ಸಬ್ಜೆಕ್ಟ್ ನಲ್ಲಿ ಅಪ್ಪು ಆಕ್ಟ್ ಮಾಡಿ ಸೈ ಎನಿಸಿಕೊಂಡಿದ್ದರು. ಒಬ್ಬ ಪ್ರಾಮಾಣಿಕ ಐಎಎಸ್ ಅಧಿಕಾರಿಯ ಪವರ್ ಏನು ಅನ್ನೋದನ್ನ ತೋರಿಸಿಕೊಟ್ಟಿದ್ದರು. ಅಪ್ಪು ಅವರ suttle ನಟನೆ youngsters ಗಳಲ್ಲಿ ತಾವು ಒಬ್ಬ IAS ಆಫೀಸರ್ ಯಾಕೆ ಆಗಬಾರದು ಅನ್ನೋ ಯೋಚನೆಯನ್ನ ಹುಟ್ಟುಹಾಕಿತ್ತು. ಪೃಥ್ವಿ ಸಿನಿಮಾ ಇವತ್ತಿಗೂ ಯುವಜನತೆಯನ್ನು inspire ಮಾಡ್ತಾ ಇದೆ ಅನ್ನೋದಕ್ಕೆ UPSC ಯಲ್ಲಿ 260ನೇ ರ್ಯಾಂಕ್ ಪಡೆದಿರುವ ಸೌರಭ್ ಮತ್ತೊಂದು ಉದಾಹರಣೆ ಅಷ್ಟೇ.

Yes, ನೀವು ಕೇಳ್ತಾ ಇರೋದು ಸತ್ಯನೇ ಮೈಸೂರಿನ ವಿಜಯನಗರದ ಕೆ.ಸೌರಭ್ ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ 260ನೇ ರ್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ. ಈ ಸಾಧನೆ ಮಾಡೋದಕ್ಕೆ ಅವರಿಗೆ ಪುನೀತ್ ರಾಜ್ ಕುಮಾರ್ ಅವರ ‘ಪೃಥ್ವಿ’ ಸಿನಿಮಾವೇ ಮುಖ್ಯವಾದ ಇನ್ಸ್ಪಿರೇಷನ್ ಅಂತ ಅಂದ್ರೆ ನೀವು ನಂಬಲೇಬೇಕು.

ಡೆಹ್ರಾಡೂನ್‌ನ ಇಂದಿರಾಗಾಂಧಿ ರಾಷ್ಟ್ರೀಯ ಅರಣ್ಯ ಅಕಾಡೆಮಿಯಲ್ಲಿ ಭಾರತೀಯ ಅರಣ್ಯ ಸೇವೆ ತರಬೇತಿಯಲ್ಲಿರುವ ಸೌರಭ್ ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ಮುಂದುವರಿಸಿ ವಿದೇಶಾಂಗ ಸೇವೆ ಸೇರುವ ಕನಸನ್ನು ಇದೀಗ ನನಸು ಮಾಡಿಕೊಳ್ಳುವ ಹಂತದಲ್ಲಿದ್ದಾರೆ.

‘2021ರಲ್ಲಿ ಭಾರತೀಯ ಅರಣ್ಯ ಸೇವೆ ಹಾಗೂ ನಾಗರಿಕ ಸೇವಾ ಪರೀಕ್ಷೆಗಳೆರಡಲ್ಲೂ ಉತ್ತೀರ್ಣನಾದ ಸೌರಭ್ ನಾಗರಿಕ ಸೇವಾ ಪರೀಕ್ಷೆಯಲ್ಲೂ 725ನೇ ರ್ಯಾಂಕ್ ಪಡೆದಿದ್ದಾರೆ, ಆ ರ್ಯಾಂಕ್ ಗೆ ಭಾರತೀಯ ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿತ್ತು. ಆದರೆ, ಅರಣ್ಯ ಸೇವಾ ಪರೀಕ್ಷೆಯಲ್ಲಿ 45ನೇ ರ್ಯಾಂಕ್ ಪಡೆದಿದ್ದರಿಂದ, ಅದನ್ನೇ ಆಯ್ಕೆ ಮಾಡಿಕೊಂಡರು. ಇದೀಗ ವಿದೇಶಾಂಗ ಸೇವೆ ಸಿಗುವ ನಿರೀಕ್ಷೆಯಲ್ಲಿ ಸೌರಭ್ ಇದ್ದಾರೆ.

ಮೈಸೂರಿನ ಸಿಎಫ್‌ಟಿಆರ್‌ಐ ಶಾಲೆಯಲ್ಲಿ 1ರಿಂದ 10ನೇ ತರಗತಿವರೆಗೆ ಓದಿ ನಂತರ ವಿಜಯನಗರದ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ (ಎಸ್‌ವಿಇಐ) ಪಿಯು ಮುಗಿಸಿ,, ನಂತರ SJCI ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್‌ನಲ್ಲಿ
ಎಂಜಿನಿಯರಿಂಗ್ ಮಾಡಿರುವ ಸೌರಭ್, ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡರು. 2017ರಲ್ಲಿ ಮರ್ಚೆಂಟ್ ನೇವಿ ಕಂಪನಿಯಲ್ಲಿ ಕೆಲಸ ಕೂಡ ಸಿಕ್ಕಿತ್ತು. ಆದರೆ, ವಿದೇಶಾಂಗ ಸೇವೆ ಸೇರುವ ಆಸೆ ಇದ್ದುದರಿಂದ ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ಆರಂಭಿಸಿದರು.

ಸೌರಭ್ ಗೆ ಪುನೀತ್ ಅವರ ಪೃಥ್ವಿ ಸಿನಿಮಾ, ಅವರು degree ಓದುವಾಗ ಸಿಕ್ಕಾಪಟ್ಟೆ attract ಮಾಡಿತ್ತಂತೆ. ಈಗಲೂ ಪೃಥ್ವಿ ಸಿನಿಮಾ ಎಂದರೆ ರೋಮಾಂಚನವಾಗುತ್ತದೆ ಅಂತ ಅವರು ಹೇಳಿಕೊಂಡಿದ್ದಾರೆ.

‘ಗುರಿಯೆಡೆಗೆ ಲಕ್ಷ್ಯವಿರಬೇಕು. ಕಡಿಮೆ ಅಂಕ ಬಂದಾಗ ಎದೆಗುಂದದೆ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಬೇಕು. ತಪ್ಪುಗಳನ್ನು ತಿದ್ದಿಕೊಳ್ಳುತ್ತಾ ಮುಂದೆ ಸಾಗಬೇಕು. ಗೆಲ್ಲುವ ದಿನ ಬಂದೇ ಬರುತ್ತದೆ’ ಅಂತ ಸೌರಭ್ ಹೇಳಿಕೊಂಡಿದ್ದಾರೆ.

ಸೋ, ಸ್ನೇಹಿತರೇ. ನಾವು ಮಾಡೋ ಕೆಲಸ ಮತ್ತೊಬ್ಬರಿಗೆ ಉತ್ತಮ ಸಂದೇಶ ಮತ್ತು ಪ್ರೇರಣೆ ನೀಡುವ ಹಾಗೆ ಇದ್ರೆ ಅದರಿಂದ ನಮ್ಮ ಜೀವನಕ್ಕೆ ಒಂದು ಸಾರ್ಥಕತೆ ಸಿಕ್ಕ ಹಾಗೆ. ಅಪ್ಪು ತಮ್ಮ ಜೀವನ ಮತ್ತು ಸಿನಿಮಾಗಳ ಮೂಲಕ ಸಾಕಷ್ಟು ಮಂದಿಗೆ inspiration ಆಗಿದ್ದಾರೆ. ಅವರ ಹುಟ್ಟಿದ ಹಬ್ಬವನ್ನ Inspiration day ಅಂತ ಆಚರಿಸಲಾಗುತ್ತೆ. ಕರ್ನಾಟಕ, ಕನ್ನಡತನ ಇರುವ ತನಕ ಅಪ್ಪು ಅಜರಾಮರ.

Contact Us for Advertisement

Leave a Reply