ಮೈಸೂರು ದಸರಾಗೆ ಉಗ್ರರ ಭೀತಿ..! ಮೂವರ ಬಂಧನ ನಿಜನಾ..?

ವಿಶ್ವವಿಖ್ಯಾತ ಮೈಸೂರು ದಸರಾಗೆ ಉಗ್ರರ ಭೀತಿ ಎದುರಾಗಿದೆ. ಯಾಕಂದ್ರೆ ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಮೂವರು ಉಗ್ರರನ್ನು ಎನ್‍ಐಎ ಅಂದ್ರೆ ರಾಷ್ಟ್ರೀಯ ತನಿಖಾ ತಂಡ ಬಂಧಿಸಿದೆ. ಜಂಬೂಸವಾರಿಗೆ ಒಂದು ದಿನ ಬಾಕಿ ಇರುವಾಗ ಈ ಸುದ್ದಿ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಜೊತೆಗೆ ಸರ್ಕಾರಕ್ಕೂ ಟೆನ್ಶನ್ ಹೆಚ್ಚುವಂತೆ ಮಾಡಿದೆ. ಇನ್ನೊಂದು ಆತಂಕಕಾರಿ ವಿಷ್ಯ ಅಂದ್ರೆ ಜಂಬೂ ಸವಾರಿಯನ್ನೇ ಗುರಿಯಾಗಿಸಿಕೊಂಡು ಸ್ಫೋಟ ನಡೆಸಲು ಈ ಉಗ್ರರು ಸಂಚು ನಡೆಸಿದ್ದರು. ಅದಕ್ಕಾಗಿ ಸ್ಯಾಟಲೈಟ್ ಫೋನ್ ಕೂಡ ಬಳಸುತ್ತಿದ್ದರು ಅಂತ ಹೇಳಲಾಗುತ್ತಿದೆಎ. ಆದ್ರೆ ಈಗ ಅದೇ ಸ್ಯಾಟಲೈಟ್ ಫೋನ್ ಸಿಗ್ನಲ್ ಆಧರಿಸಿ ಶಂಕಿತರನ್ನು ಬಂಧಿಸಲಾಗಿದೆ ಎನ್ನಲಾಗುತ್ತಿದೆ. ಆದ್ರೆ ರಾಷ್ಟ್ರೀಯ ತನಿಖಾ ತಂಡ ಶ್ರೀರಂಗಪಟ್ಟಣಕ್ಕೆ ಬಂದಿರೋ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ಇಲ್ಲ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರನ್ನ ಕೇಳಿದ್ರೆ, ಬಂಧನದ ಕುರಿತು ಯಾವುದೇ ಮಾಹಿತಿ ನಮಗೆ ಬಂದಿಲ್ಲ ಎಂದಿದ್ದಾರೆ.

Contact Us for Advertisement

Leave a Reply