ಬಳ್ಳಾರಿ ಆಯ್ತು..ಈಗ ಮೈಸೂರು ವಿಭಜನೆ ಕೂಗು..!

ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ಪ್ರತ್ಯೇಕವಾಗಿ ವಿಜಯನಗರ ಜಿಲ್ಲೆ ರಚಿಸಬೇಕು ಎಂಬ ಕೂಗು ಜೋರಾಗಿ, ಭಾರಿ ಪರ, ವಿರೋಧ ವ್ಯಕ್ತವಾಗಿ ಈಗ ಪ್ಲಾನ್ ಮುಂದಕ್ಕೆ ಹೋಗಿದೆ. ಅದ್ರ ಬೆನ್ನಲ್ಲೇ ಈಗ ಸಾಂಸ್ಕೃತಿಕ ನಗರಿ ಮೈಸೂರನ್ನು 2 ಭಾಗ ಮಾಡಬೇಕು ಎಂಬ ಕೂಗು ಕೇಳಿಬಂದಿದೆ. ಹುಣಸೂರು ಕ್ಷೇತ್ರದ ಅನರ್ಹ ಶಾಸಕ ಹೆಚ್.ವಿಶ್ವನಾಥ್ ಮೈಸೂರು ವಿಭಜನೆಗೆ ಆಗ್ರಹಿಸಿದ್ದು, ಇದಕ್ಕಾಗಿ ಒಂದು ಸಮಿತಿ ರಚಿಸಿ ಹೋರಾಟ ಮಾಡೋದಾಗಿ ಘೋಷಿಸಿದ್ದಾರೆ. ಜೊತೆಗೆ ಹುಣಸೂರು ತಾಲೂಕನ್ನು ಜಿಲ್ಲೆಯಾಗಿ ಘೋಷಿಸಿ, ಅದಕ್ಸಕೆ ದೇವರಾಜ ಅರಸ್ ಜಿಲ್ಲೆ ಎಂದು ಹೆಸರಿಡಬೇಕು. ಹೊಸ ಜಿಲ್ಲೆ ವ್ಯಾಪ್ತಿಗೆ ಕೆ.ಆರ್.ನಗರ, ಹೆಚ್.ಡಿ.ಕೋಟೆ, ಪಿರಿಯಾಪಟ್ಟಣ, ಹುಣಸೂರು ಜೊತೆ 2 ಹೊಸ ತಾಲೂಕು ಸೇರಿಸಿ ಜಿಲ್ಲೆ ಮಾಡಬೇಕು ಎಂದು ಸರ್ಕಾರದ ಮುಂದೆ ಪ್ರಸ್ತಾವನೆ ಇಟ್ಟಿದ್ದಾರೆ.

ಈ ಹಿಂದೆ ಬಳ್ಳಾರಿಯಲ್ಲೂ ಇದೇ ರೀತಿ ಕೂಗು ಬಂದಿತ್ತು. ಆದ್ರೆ ಆನಂದ್ ಸಿಂಗ್ ಸೇರಿದಂತೆ ಹಲವರು ಹೊಸ ಜಿಲ್ಲೆಯ ಪರವಾಗಿದ್ರೆ, ರಾಮುಲು ಸೇರಿದಂತೆ ಬಿಜೆಪಿಯ ಕೆಲ ನಾಯಕರು ಜಿಲ್ಲೆ ವಿಭಜನೆಗೆ ವಿರೋಧ ವ್ಯಕ್ತಪಡಿಸಿದ್ದರು. ನಂತರ ಸರ್ಕಾರ ಜಿಲ್ಲೆ ವಿಭಜನೆಗೆ ಸಿದ್ಧತೆ ಕೂಡ ನಡೆಸಿತ್ತು. ಆದ್ರೆ ಅಂತಿಮವಾಗಿ ನಡೆದ ಸಭೆಯಲ್ಲಿ ಬಳ್ಳಾರಿ ವಿಭಜನೆ ಪ್ರಕ್ರಿಯೆಯನ್ನು ಸ್ವಲ್ಪ ಅಂದ್ರೆ ಉಪಚುನಾವಣೆ ಮುಗಿಯೋವರೆಗೆ ಮುಂದಕ್ಕೆ ಹಾಕಲು ನಿರ್ಧರಿಸಲಾಗಿತ್ತು.

 

Contact Us for Advertisement

Leave a Reply