ಇವತ್ತು ದಸರಾ! ಎಲ್ಲೆಲ್ಲಿ.. ಹೇಗೆಲ್ಲಾ ನಡೀತು ದಸರಾ..?

masthmagaa.com:

ವಿಶ್ವ ವಿಖ್ಯಾತ ಮೈಸೂರು ದಸರಾದ ಐತಿಹಾಸಿಕ ಜಂಬೂ ಸವಾರಿ ಇವತ್ತು ಸರಳವಾಗಿ ನಡೆಯಿತು. ಸಿಎಂ ಬಸವರಾಜ ಬೊಮ್ಮಾಯಿ, ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಿದ್ರು. 750 ಕೆಜಿ ಚಿನ್ನದ ಅಂಬಾರಿ ಹೊತ್ತು ಕ್ಯಾಪ್ಟನ್ ಅಭಿಮನ್ಯು ಹೆಜ್ಜೆ ಹಾಕಿದ್ರೆ, ಅಕ್ಕಪಕ್ಕದಲ್ಲಿ ಚೈತ್ರ, ಕಾವೇರಿ ಆನೆಗಳು ಸಾಥ್ ನೀಡಿದವು. ಕೊರೊನಾ ಹಿನ್ನೆಲೆ ಕಳೆದ ಬಾರಿಯಂತೆ ಈ ಬಾರಿಯೂ ಸರಳವಾಗಿ ದಸರಾ ಆಚರಿಸಲಾಯ್ತು. ಜಂಬೂ ಸವಾರಿ ಮೆರವಣಿಗೆ ಅರಮನೆ ಅಂಗಳಕ್ಕೆ ಸೀಮಿತವಾಗಿತ್ತು. ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಎಂ, ಸಚಿವರು ಸೇರಿದಂತೆ ಬಹುತೇಕರು ಮಾಸ್ಕ್​ ಹಾಕದೇ ಇದ್ದಿದ್ದು ಕಂಡು ಬಂತು.

– ಇನ್ನು ವಿಜಯದಶಮಿ ಹಿನ್ನೆಲೆ ರಕ್ಷಣಾ ಸಚಿವ ರಾಜ್​​ನಾಥ್​ ಸಿಂಗ್​ ದೆಹಲಿಯ ಡಿಆರ್​ಡಿಒ ಕ್ಯಾಂಪಸ್​​ನಲ್ಲಿ ಶಸ್ತ್ರ ಪೂಜೆ ನೇರವೇರಿಸಿದ್ರು.
– ಪುಣೆಯಲ್ಲಿ ವಿಜಯದಶಮಿ ಹಿನ್ನೆಲೆ ಶ್ರೀ ಮಹಾಲಕ್ಷ್ಮೀ ದೇವಾಲಯದಲ್ಲಿ ದೇವಿಗೆ ಬಂಗಾರದ ಸೀರೆಯನ್ನ ತೊಡಿಸಲಾಯ್ತು. 16 ಕೆಜಿ ತೂಕದ ಈ ಸೀರೆಯನ್ನ ಭಕ್ತರೊಬ್ಬರು 11 ವರ್ಷದ ಹಿಂದೆ ನೀಡದ್ದರಂತೆ. ಅಂದಿನಿಂದ ಈ ಸೀರೆಯನ್ನ ವಿಜಯದಶಮಿ ಮತ್ತು ಲಕ್ಷ್ಮೀ ಪೂಜೆ ದಿನ ತೊಡಿಸಲಾಗುತ್ತೆ.
– ಇನ್ನು ಇವತ್ತು ದುರ್ಗಾ ಪೂಜೆಯ ಕೊನೇ ದಿನವಾದ ಹಿನ್ನೆಲೆ ಪಶ್ಚಿಮ ಬಂಗಾಳ, ಝಾರ್ಖಂಡ್​ ಮುಂತಾದ ಕಡೆ ಮಹಿಳೆಯರು ‘ಸಿಂದೂರ್​ ಖೇಲಾ’ದಲ್ಲಿ ಭಾಗವಹಿಸಿ ಡಾನ್ಸ್ ಮಾಡಿದ್ರು.
– ದಸರಾ ಹಿನ್ನೆಲೆ ದೇಶದ ಹಲವೆಡೆ ರಾವಣನ ಪ್ರತಿಕೃತಿಯನ್ನ ದಹಿಸಲಾಯ್ತು.

-masthmagaa.com

Contact Us for Advertisement

Leave a Reply