ಪಕ್ಷಕ್ಕೆ ಎಲ್ಲರು ಒಂದೇ… ಬಸನಗೌಡ ವಿರುದ್ಧ ನಳಿನ್ ಕೆಂಡ

ಯಾದಗಿರಿ: ಹೋದಲ್ಲಿ ಬಂದಲ್ಲಿ ಬಿಜೆಪಿ ಹೈಕಮಾಂಡ್ ವಿರುದ್ಧ ಮಾತನಾಡಿಕೊಂಡು ಓಡಾಡುತ್ತಿರುವ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್​​​​ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಯಾದಗಿರಿಯಲ್ಲಿ ಮಾತನಾಡಿದ ಅವರು, ವಿವರಣೆ ಕೇಳಿದಾಗ ಉತ್ತರ ನೀಡೋದು ಪ್ರತಿಯೊಬ್ಬರ ಕರ್ತವ್ಯವಾಗುತ್ತೆ. ಉತ್ತರ ಕೊಡದೇ ಇರೋದು ಅಹಂಕಾರವಾಗುತ್ತೆ. ಪಕ್ಷಕ್ಕೆ ಅದ್ರದ್ದೇ ಆದ ನೀತಿ ಚೌಕಟ್ಟು ಇದ್ದು, ಎಷ್ಟೇ ದೊಡ್ಡ ವ್ಯಕ್ತಿಯಾದ್ರೂ ಕೂಡ ಪಕ್ಷಕ್ಕೆ ಎಲ್ಲರೂ ಒಂದೇ, ಪಕ್ಷಕ್ಕಿಂತ ದೊಡ್ಡವರು ಯಾರೂ ಇಲ್ಲ ಎಂದು ಪರೋಕ್ಷವಾಗಿ ಕೆಂಡಕಾರಿದ್ದಾರೆ.

ಪಕ್ಷದ ವಿರುದ್ಧ ಮಾತನಾಡಿದ್ದಕ್ಕೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​​ಗೆ ನೋಟಿಸ್ ನೀಡಲಾಗಿತ್ತು. ಆದ್ರೆ ಬಸನಗೌಡ ಪಾಟೀಲ್ ಯತ್ನಾಳ್ ಪಕ್ಷದಿಂದ ನೀಡಲಾಗಿದ್ದ ನೋಟಿಸ್​​​ಗೆ ಉತ್ತರ ನೀಡಿರಲಿಲ್ಲ. ಹೀಗಾಗಿ ಇವತ್ತು ಪ್ರತಿಕ್ರಿಯಿಸಿದ ನಳಿನ್ ಕುಮಾರ್ ಕಟೀಲ್, ಪಕ್ಷದಿಂದ ಬಿಫಾರಂ ಪಡೆದ ಮೇಲೆ ಪಕ್ಷದ ನೀತಿ, ನಿಯಮದ ಒಳಗೆ ಮಾತನಾಡಬೇಕು. ಅದನ್ನು ಮೀರಿ ಮಾತನಾಡಿದ್ರೆ ವಿವರಣೆ ಕೇಳೋದು ಸಹಜ. ಅದಕ್ಕೆ ಕಾರ್ಯಕರ್ತರಾದವರು ಉತ್ತರ ನೀಡಬೇಕು. ಅಷ್ಟೇ ಅಲ್ಲ. ರಾಜ್ಯಾಧ್ಯಕ್ಷ ಆಗಿದ್ದರೂ ಕೂಡ ನನ್ನಿಂದ ಏನಾದ್ರೂ ತಪ್ಪು ಆದ್ರೆ ಅದಕ್ಕೆ ನಾನು ಉತ್ತರ ನೀಡಲೇಬೇಕು ಎಂದ್ರು.

 

Contact Us for Advertisement

Leave a Reply