masthmagaa.com:

ಸ್ಯಾಂಡಲ್​ವುಡ್​, ಬಾಲಿವುಡ್​ನ ಹಲವು ನಟ, ನಟಿಯರಿಗೆ ಸುತ್ತಿಕೊಂಡಿರುವ ಡ್ರಗ್ಸ್ ನಂಟು ಇದೀಗ ಬಾಲಿವುಡ್​ ನಟ ಅರ್ಜುನ್ ರಾಂಪಾಲ್​ಗೂ ಸುತ್ತಿಕೊಳ್ಳುವ ಲಕ್ಷಣ ಕಾಣ್ತಿದೆ. ಇವತ್ತು ಎನ್​ಸಿಬಿ (Narcotics Control Bureau) ಅಧಿಕಾರಿಗಳು ಅರ್ಜುನ್ ರಾಂಪಾಲ್​ಗೆ ಸೇರಿದ ಮುಂಬೈನ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ನಟನಿಗೆ ಸೇರಿದ ಎಲೆಕ್ಟ್ರಾನಿಕ್ ಡಿವೈಸ್​ಗಳನ್ನ ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ನವೆಂಬರ್ 11ರಂದು ವಿಚಾರಣೆಗೆ ಹಾಜರಾಗುವಂತೆ ಅರ್ಜುನ್ ರಾಂಪಾಲ್ ಮತ್ತು ಅವರ ಗರ್ಲ್​​ಫ್ರೆಂಡ್​ ಗೇಬ್ರಿಯೆಲ್ಲಾ ಡಿಮೆಟ್ರಿಯೇಡ್ಸ್​ಗೆ ಎನ್​ಸಿಬಿ ಅಧಿಕಾರಿಗಳು ಸಮನ್ಸ್ ನೀಡಿದ್ದಾರೆ. ಗೇಬ್ರಿಯೆಲ್ಲಾ ದಕ್ಷಿಣ ಆಫ್ರಿಕಾ ಮೂಲದವರು.

ನಿನ್ನೆಯಷ್ಟೇ ಬಾಲಿವುಡ್​ ಸಿನಿಮಾ ನಿರ್ಮಾಪಕ ಫಿರೋಜ್ ನಾಡಿಯದ್​ವಾಲಾ ಮನೆ ಮೇಲೆ ಎನ್​ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಅವರ ಮನೆಯಲ್ಲಿ 10 ಗ್ರಾಂನಷ್ಟು ಗಾಂಜಾ ಸಿಕ್ಕ ಹಿನ್ನೆಲೆ ಫಿರೋಜ್ ಅವರ ಪತ್ನಿಯನ್ನು ಅರೆಸ್ಟ್ ಮಾಡಲಾಗಿತ್ತು. ಇದೀಗ ಅರ್ಜುನ್ ರಾಂಪಾಲ್ ಅವರ ಮನೆ ಮೇಲೂ ದಾಳಿ ನಡೆಸಿರೋದು ಸಾಕಷ್ಟು ಕುತೂಹಲ ಕೆರಳಿಸಿದೆ.

-masthmagaa.com

Contact Us for Advertisement

Leave a Reply