ಮೋದಿಯನ್ನು ಭಾರತದ ರಾಷ್ಟ್ರಪಿತ ಎಂದ ಟ್ರಂಪ್..! ಕಾಂಗ್ರೆಸ್ ಕೆಂಡ

ನಿನ್ನೆ ನ್ಯೂಯಾರ್ಕ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ರು. ನಂತರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್, ಮೋದಿಯವರನ್ನು ಹಾಡಿ ಹೊಗಳಿದ್ರು. ಈ ವೇಳೆ ಪ್ರಧಾನಿ ಮೋದಿಯವರನ್ನು ಫಾದರ್ ಆಫ್ ಇಂಡಿಯಾ ಎಂದು ಕರೆದು ಬಿಟ್ರು. ಟ್ರಂಪ್ ಅವರ ಈ ಹೇಳಿಕೆಗೆ ಕಾಂಗ್ರೆಸ್ ಭಾರಿ ವಿರೋಧ ವ್ಯಕ್ತಪಡಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ, ಈಗ ನಮ್ಮ ರಾಷ್ಟ್ರಪಿತ ಯಾರು ಅನ್ನೋದನ್ನ ಅಮೆರಿಕಾ ನಿರ್ಧರಿಸುತ್ತಾ..? ಈ ಫ್ಯಾಸಿಸ್ಟರು ಜನರನ್ನು ಬೌದ್ಧಿಕವಾಗಿ ಲೂಟಿ ಮಾಡಿದ್ದಾರೆ ಅಂತ ಕಿಡಿಕಾರಿದ್ದಾರೆ. ಬಿಜೆಪಿಯ ಸಂಸದ ತೇಜಸ್ವಿ ಸೂರ್ಯ ಪ್ರಧಾನಿ ಮೋದಿಯವರನ್ನು ಟ್ರಂಪ್ ಹೊಗಳಿದ್ದಕ್ಕೆ ಮಹತ್ವ ಕೊಟ್ಟು ಟ್ವೀಟ್ ಮಾಡಿದ್ದರು. ಅದಕ್ಕೆ ಉತ್ತರವಾಗಿ ರೀಟ್ವೀಟ್ ಮಾಡಿರೋ ಪ್ರಿಯಾಂಕ್ ಬಿಜೆಪಿ ವಿರುದ್ಧ ಕೆಂಡಕಾರಿದ್ದಾರೆ. ಕೇವಲ ಪ್ರಿಯಾಂಕ್ ಖರ್ಗೆ ಮಾತ್ರವಲ್ಲದೆ ಇನ್ನೂ ಹಲವಾರು ಜನ ಈ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

Contact Us for Advertisement

Leave a Reply